×
Ad

ವಲಸೆ ಕಾರ್ಮಿಕರಿಗೆ ಪ್ರತಿದಿನ ಎರಡು ಲಕ್ಷ ದಿನಸಿ ಕಿಟ್ ವಿತರಣೆ: ಬಸವರಾಜ್ ಬೊಮ್ಮಾಯಿ

Update: 2020-04-21 17:03 IST

ಬೆಂಗಳೂರು, ಎ, 21: ರಾಜ್ಯದಲ್ಲಿ ನೆಲೆಸಿರುವ ವಲಸೆ ಕಾರ್ಮಿಕರಿಗೆ ಪ್ರತಿ ದಿನ ಎರಡು ಲಕ್ಷ ದಿನಸಿ ಕಿಟ್ (ಗ್ರಾಸರಿಕಿಟ್) ವಿತರಿಸಲು ರಾಜ್ಯ ಸರಕಾರ ಕ್ರಮ ಕೈಗೊಂಡಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ನಾಗರಿಕ ರಕ್ಷಣಾ ವಿಭಾಗ ಹಾಗೂ ಇಸ್ಕಾನ್ ಅಕ್ಷಯ ಪಾತ್ರ ಫೌಂಡೇಷನ್‍ನ ಸ್ವಯಂ ಸೇವಕರು ಕಾರ್ಮಿಕ ಇಲಾಖೆ ಹಾಗೂ ಬಿಬಿಎಂಪಿ ಅರಮನೆಯ ತ್ರಿಪುರವಾಸಿನಿ ಆವರಣದಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರದ ಅನುದಾನದ ನೆರವಿನಿಂದ ದಿನಸಿ ಕಿಟ್ ಸಿದ್ಧಪಡಿಸುವ ಪ್ರಧಾನ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಚಟುವಟಿಕೆಗಳನ್ನು ಗಮನಿಸಿ ಅವರು ಮಾತನಾಡಿದರು.

ಪ್ರತಿ ದಿನಸಿ ಕಿಟ್‍ನಲ್ಲಿ ಉತ್ತಮ ಗುಣಮಟ್ಟದ ಐದು ಕೆ.ಜಿ ಅಕ್ಕಿ, ಎರಡು ಕೆ.ಜಿ ತೊಗರಿ ಬೇಳೆ, 250 ಗ್ರಾಂ ಕಡಲೆ, 500 ಗ್ರಾಂ. ಅಡುಗೆಎಣ್ಣೆ, ತಲಾ 200 ಗ್ರಾಂ ರಸಂ ಪುಡಿ ಮತ್ತು ಸಾಂಬಾರ್ ಪುಡಿ, 100 ಗ್ರಾಂ ಹಸಿಖಾರದ ಪುಡಿ, 200 ಗ್ರಾಂ ಉಪ್ಪಿನಕಾಯಿ, 500 ಗ್ರಾಂ ಸಕ್ಕರೆ, ಎರಡು ಕೆ.ಜಿಗೋಧಿ ಹಿಟ್ಟು ಅಥವಾ ಇಡ್ಲಿ ರವೆ ಇರುತ್ತದೆ. ಪ್ರತಿ ಕಿಟ್‍ನಲ್ಲಿ ಓರ್ವ ವ್ಯಕ್ತಿ ದಿನಕ್ಕೆ ಎರಡು ಬಾರಿಯಂತೆ 21 ದಿನ ಊಟ ತಯಾರಿಸಿ ಕೊಳ್ಳುವಷ್ಟು ದಿನಸಿ ಪದಾರ್ಥಗಳು ಇವೆ ಎಂದು ಹೇಳಿದರು. 

ಕರ್ನಾಟಕ ನಾಗರಿಕ ರಕ್ಷಣಾ ಪಡೆಯು ಕೊರೋನದಂತಹ ಕಠಿಣ ಪರಿಸ್ಥಿತಿಯಲ್ಲೂ ಸೇವಾ-ಮನೋಭಾವದೊಂದಿಗೆ ಸರಕಾರದಿಂದ ಯಾವುದೇ ವೇತನ ಪಡೆಯದೇ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.

ಅಕ್ಷಯ ಪಾತ್ರ ಫೌಂಡೇಷನ್ ಸಂವಹನ ವಿಭಾಗದ ಮುಖ್ಯಸ್ಥ ನವೀನ ನೀರದದಾಸ ಮಾತನಾಡಿ, ಇಸ್ಕಾನ್ ಸಂಸ್ಥೆಯು ಸ್ವಯಂ-ಪ್ರೇರಿತವಾಗಿ ಈವರೆಗೆ ನಗರದ ವಿವಿಧೆಡೆಗಳಲ್ಲಿ 80 ಸಾವಿರಕ್ಕೂ ಹೆಚ್ಚು ದಿನಸಿ ಪದಾರ್ಥಗಳ ಕಿಟ್ ವಿತರಣೆ ಮಾಡಿದೆ. ಅಲ್ಲದೆ, ಪ್ರತಿ ದಿನವೂ ದಿನಸಿ ಕಿಟ್ ಸಿದ್ಧಪಡಿಸುವ ಕಾಯಕದಲ್ಲಿ ತೊಡಗಿದೆ ಎಂದರು.

ರಾಜ್ಯ ವಿಪತ್ತು ಸ್ಪಂದನಾ ಪಡೆಯ ಮಹಾ ನಿರ್ದೇಶಕ ಎ.ಎಂ. ಪ್ರಸಾದ್, ನಾಗರಿಕ ರಕ್ಷಣಾ ಪಡೆಯ ಕ್ಷಿಪ್ರ ಸ್ಪಂದನಾ ತಂಡದ ಮುಖ್ಯಸ್ಥ ಡಾ.ಪಿಆರ್.ಎಸ್‍ಚೇತನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News