ಲಾಕ್‍ಡೌನ್: ಬಸವ, ಶಂಕರಾಚಾರ್ಯ, ಭಗೀರಥ ಜಯಂತಿ ಸರಳವಾಗಿ ಆಚರಣೆ
Update: 2020-04-21 22:59 IST
ಬೆಂಗಳೂರು, ಎ.21: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಎ.26ರಂದು ಬಸವ ಜಯಂತಿ ಹಾಗೂ ಎ.28ರಂದು ಶಂಕರಾಚಾರ್ಯ ಜಯಂತಿ ಹಾಗೂ ಎ.30ರಂದು ಭಗೀರಥ ಜಯಂತಿಗಳನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ.
ಕೊರೋನ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮೇ 3ರವರೆಗೆ ರಾಜ್ಯಾದ್ಯಂತ ಲಾಕ್‍ಡೌನ್ ಇರುವುದರಿಂದ ಬಸವ, ಶಂಕರಾಚಾರ್ಯ ಹಾಗೂ ಭಗೀರಥ ಜಯಂತಿಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಸೂಚನೆಯ ಮೇರೆಗೆ ಅತ್ಯಂತ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಪತ್ರಿಕಾ ಪ್ರಕಟನೆಯ ಮೂಲಕ ತಿಳಿಸಿದ್ದಾರೆ.