ಗರ್ಭಿಣಿಯರಿಗೆ ಕೋವಿಡ್-19 ಕರ್ತವ್ಯದಿಂದ ವಿನಾಯಿತಿ: ಆರೋಗ್ಯ ಇಲಾಖೆ ಸ್ಪಷ್ಟನೆ

Update: 2020-04-22 17:08 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.22: ರಾಜ್ಯಾದ್ಯಂತ ಕೋವಿಡ್-19 ಚಿಕಿತ್ಸೆಗಾಗಿ ಗುರುತಿಸಲ್ಪಟ್ಟಿರುವ ಆಸ್ಪತ್ರೆಗಳಲ್ಲಿ ಕೊರೋನ ಶಂಕಿತರು, ಸೋಂಕಿತರ ಚಿಕಿತ್ಸೆಗಾಗಿ ಹಾಗೂ ಸಾಂಕ್ರಾಮಿಕವನ್ನು ನಿಯಂತ್ರಣದಲ್ಲಿರಿಸಲು ಸಹಾಯವಾಗುವಂತೆ ವೈದ್ಯಕೀಯ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಆದರೆ, ಇವರಲ್ಲಿ ಗರ್ಭಿಣಿಯರು ಹಾಗೂ ಒಂದು ವರ್ಷ ತುಂಬದ ಮಗುವಿನ ತಾಯಂದಿರು ಇದ್ದಲ್ಲಿ ಇವರ ಆರೋಗ್ಯದ ದೃಷ್ಟಿಯಿಂದ ಇವರಿಗೆ ಕೋವಿಡ್-19ರ ಕರ್ತವ್ಯದಿಂದ ವಿನಾಯಿತಿ ನೀಡಿ, ಆರೋಗ್ಯ ಸಂಸ್ಥೆಗಳಲ್ಲಿನ ಇತರೆ ಕಾರ್ಯಗಳಿಗೆ ನಿಯೋಜಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರು ಸೂಚನೆ ನೀಡಿದೆ.

ಕೋವಿಡ್-19 ಅನ್ನು ನಿಯಂತ್ರಣದಲ್ಲಿ ಇರಿಸಲು ವೈದ್ಯಕೀಯ ಮತ್ತು ಅರೆ ವೈದ್ಯಕೀಯ ವರ್ಗದವರು, ಗ್ರೂಪ್ ಡಿ ನೌಕರರು ಹಾಗೂ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News