×
Ad

ಕಲಬುರಗಿ: ಆಸ್ಪತ್ರೆಯಲ್ಲಿ ದಾಖಲಿಸಲು ಸಿಬ್ಬಂದಿ ವಿಳಂಬ; ಆವರಣದಲ್ಲೇ ಜನ್ಮ ನೀಡಿದ ಮಹಿಳೆ

Update: 2020-04-23 00:10 IST

ಕಲಬುರಗಿ, ಎ.23: ಕೊರೋನ ಭೀತಿ ಹಿನ್ನೆಯಲ್ಲಿ ಗರ್ಭಿಣಿ ಮಹಿಳೆಗೆ ಆಸ್ಪತ್ರೆಯಲ್ಲಿ ದಾಖಲಿಸಲು ವಿಳಂಬ ಮಾಡಿರುವ ಪರಿಣಾಮ ಇಲ್ಲಿನ ಜಿಮ್ಸ್ ಆಸ್ಪತ್ರೆ ಆವರಣದಲ್ಲಿ ಮಹಿಳೆಗೆ ಹೆರಿಗೆಯಾದ ಘಟನೆ ಇಂದು ನಡೆದಿದೆ. 

ಜೇವರ್ಗಿ ತಾಲೂಕಿನ ಚೆನ್ನಮ್ಮ ಮಗುವಿಗೆ ಜನ್ಮ ನೀಡಿದ ಮಹಿಳೆ ಎಂದು ತಿಳಿದುಬಂದಿದ್ದು, ಇಂದು ಬೆಳಗ್ಗೆ ಜಿಮ್ಸ್ ಆಸ್ಪತ್ರೆಗೆ ಬಂದಿದ್ದ ಗರ್ಭಿಣಿಗೆ ಸಕಾಲಕ್ಕೆ ಅಲ್ಲಿನ ಸಿಬ್ಬಂದಿ ಸ್ಪಂದಿಸಿರಲಿಲ್ಲ. ಆಸ್ಪತ್ರೆಯೊಳಗೆ ಮಹಿಳೆಯನ್ನು ದಾಖಲಿಸಿಕೊಳ್ಳಲು ಅಲ್ಲಿನ ಸಿಬ್ಬಂದಿ ಹಿಂದು ಮುಂದು ನೋಡಿದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ. ಹೀಗಾಗಿ ಆಸ್ಪತ್ರೆಯ ಮುಂಭಾಗದಲ್ಲಿಯೇ ಹೆರಿಗೆಯಾಗಿದೆ.

ಘಟನೆ ಕುರಿತು ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದು, ಹೆರಿಗೆಯಾದ ಮೇಲೆ ಆಸ್ಪತ್ರೆಯೊಳಗೆ ಕರೆದೊಯ್ದು, ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News