ಹನೂರು: ಬಾವಿಗೆ ಬಿದ್ದ ಕಾಡಾನೆಯ ರಕ್ಷಣೆ

Update: 2020-04-23 12:19 GMT

ಹನೂರು: ಮೇವು ನೀರು ಹರಸಿ ಕಾಡಿನಿಂದ ಅರಣ್ಯದಂಚಿನ ಜಮೀನಿಗೆ ಬಂದು ಬಾವಿಗೆ ಬಿದ್ದಿದ್ದ ಕಾಡಾನೆಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಲು ಅರಣ್ಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಮಲೆಮಹದೇಶ್ವರ ವನ್ಯಜೀವಿವಲಯ ವ್ಯಾಪ್ತಿಯಲ್ಲಿ ಬರುವ ಚೆನ್ನೇಗೌಡ ದೂಡ್ಡಿ ಗ್ರಾಮದ ಗೋವಿಂದ ಎಂಬವರ ಜಮೀನಿನಲ್ಲಿದ್ದ ಬಾವಿಗೆ 15 ವರ್ಷದ ಕಾಡಾನೆ ಬಿದ್ದಿದೆ. ನಂತರ ಜಮೀನಿನ ಮಾಲಕರು ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಜೆಸಿಬಿ ಯಂತ್ರದ ಮೂಲಕ ಆನೆಯನ್ನು ಮೇಲಕ್ಕೆತ್ತುವಲ್ಲಿ ಅರಣ್ಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಕಾರ್ಯಾಚರಣೆಯಲ್ಲಿ ಆರ್‍ಎಫ್‍ಓ ಸುಂದರ್ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News