×
Ad

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಎ.24ರಿಂದ ಗರ್ಭಿಣಿಯರು, ಮಕ್ಕಳಿಗೆ ಲಸಿಕೆ: ಸಚಿವ ಸುರೇಶ್‍ ಕುಮಾರ್

Update: 2020-04-23 21:14 IST

ಬೆಂಗಳೂರು, ಎ.23: ಕೊರೋನ ವೈರಸ್ ಹರಡುವಿಕೆ ತಡೆಗಟ್ಟುವ ಸಂಬಂಧ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಎ.24ರಿಂದ ಗರ್ಭಿಣಿ ಮತ್ತು ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯಕ್ರಮ ಆರಂಭಿಸಲಾಗುತ್ತಿದೆ ಎಂದು ಸಚಿವ ಸುರೇಶ್‍ ಕುಮಾರ್ ತಿಳಿಸಿದ್ದಾರೆ. 

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರ್ಬಂಧಿತ ಪ್ರದೇಶಗಳಲ್ಲಿ ಲಸಿಕೆ ಹಾಕುತ್ತಿಲ್ಲ. ಅಲ್ಲದೆ, ನಿರ್ಬಂಧಿತ ಪ್ರದೇಶಗಳಲ್ಲಿ ನಿಯೋಜನೆ ಆಗಿರುವವರು, ಕೊರೋನ ಆಸ್ಪತ್ರೆಯಲ್ಲಿ ನಿಯೋಜನೆ ಆಗಿರುವವರು, ಈ ಲಸಿಕಾ ಕಾರ್ಯಕ್ರಮದಲ್ಲಿ ಭಾಗಿಯಾಗುವಂತಿಲ್ಲ ಎಂದು ತಿಳಿಸಿದರು. 

ಕೋವಿಡ್-19 ಆಸ್ಪತ್ರೆಯಲ್ಲಿ ಲಸಿಕಾ ಕಾರ್ಯಕ್ರಮ ಇಲ್ಲ. ಮಗು ಅಥವಾ ಗರ್ಭಿಣಿ ತಾಯಿಗೆ ಜ್ವರ, ಕೆಮ್ಮು, ನೆಗಡಿ ಇದ್ದರೆ ಲಸಿಕೆ ಹಾಕುವಂತಿಲ್ಲ ಎಂದು ರಾಜ್ಯ ಆರೋಗ್ಯ ಇಲಾಖೆಯಿಂದ ಸೂಚನೆ ನೀಡಲಾಗಿದೆ. 

ರಾಜ್ಯದಲ್ಲಿ ಅನೇಕ ಮಂಗಳಮುಖಿಯರಿಗೆ ಊಟಕ್ಕೆ ತೊಂದರೆಯಾಗಿದ್ದು, ಕೆಲವರು ಮೆಡಿಸಿನ್ ಇಲ್ಲದೆ ಪರದಾಡುವಂತಾಗಿದೆ. ಈ ವಿಚಾರ ಎರಡು ದಿನಗಳ ಹಿಂದೆ ಸರಕಾರದ ಗಮನಕ್ಕೆ ಬಂದಿದೆ. ಅವರಿಗೂ ರೇಷನ್ ಮತ್ತು ಔಷಧಿ ಪೂರೈಕೆಗೆ ಸರಕಾರ ಆದೇಶಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಪೂರೈಕೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News