ಕರಾವಳಿ ಹೊರತುಪಡಿಸಿ ರಾಜ್ಯಾದ್ಯಂತ ಶನಿವಾರದಿಂದ ರಮಝಾನ್ ಉಪವಾಸ
Update: 2020-04-23 22:06 IST
ಬೆಂಗಳೂರು, ಎ.22: ಕರಾವಳಿ ಜಿಲ್ಲೆಗಳು ಹೊರತುಪಡಿಸಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಶನಿವಾರ(ಎ.25)ದಿಂದ ಪವಿತ್ರ ರಮಝಾನ್ ಮಾಸದ ಉಪವಾಸ ಆರಂಭವಾಗುವ ಸಾಧ್ಯತೆಯಿದೆ.
ಶುಕ್ರವಾರ ಸಂಜೆ ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ವಕ್ಫ್ ಬೋರ್ಡ್ ಕಚೇರಿಯಲ್ಲಿ ರಾಜ್ಯ ಚಂದ್ರ ದರ್ಶನ ಸಮಿತಿಯ ಸಭೆಯ ನಡೆಯಲಿದ್ದು ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಬೀಳಲಿದೆ.
ಕೇರಳದ ಕಾಪಾಡ್‍ನಲ್ಲಿ ಗುರುವಾರ ಸಂಜೆ ರಮಝಾನ್ ಮಾಸದ ಪ್ರಥಮ ಚಂದ್ರ ದರ್ಶನವಾಗಿರುವುದರಿಂದ ಕರಾವಳಿ ಜಿಲ್ಲೆಗಳಲ್ಲಿ ಶುಕ್ರವಾರದಿಂದ ರಮಝಾನ್ ಉಪವಾಸ ಆರಂಭವಾಗಲಿದೆ.