ಕಳ್ಳ ಭಟ್ಟಿ ಪ್ರಕರಣ: ಬಿಜೆಪಿ ತಾಲೂಕು ಅಧ್ಯಕ್ಷ ಮಂಜುನಾಥ್ ವಿರುದ್ಧ ಎಫ್‌ಐಆರ್
Update: 2020-04-23 22:23 IST
ಸಕಲೇಶಪುರ, ಎ.23: ಕಳ್ಳ ಭಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ತಾಲೂಕು ಅಧ್ಯಕ್ಷ ಮಂಜುನಾಥ್ ಸಂಗಿ ವಿರುದ್ಧ ಪ್ರಕರಣ ದಾಖಲಾಗಿದೆ.
ತಾಲೂಕಿನ ದೇವಲಕೆರೆ ಗ್ರಾಮದ ನೀಕನಹಳ್ಳಿ ನಿವಾಸಿ ಮಂಜುನಾಥ್ ಸಂಗಿ ಮನೆಯಿಂದ 2 ಲೀಟರ್ ಕಳ್ಳಭಟ್ಟಿ ಹಾಗೂ 10 ಕೊಳೆ ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಂಜುನಾಥ್ ತಲೆಮರೆಸಿಕೊಂಡಿದ್ದಾನೆ. ಕರ್ನಾಟಕ ರಾಜ್ಯ ಅಬಕಾರಿ ಕಾಯ್ದೆ 13/ 1, 32/ 1, 38(ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಖಚಿತ ಮಾಹಿತಿಯ ಮೇರೆಗೆ ಇಲಾಖೆಯ ವತಿಯಿಂದ ಮನೆಯ ಮೇಲೆ ದಾಳಿ ಮಾಡಿದಾಗ 2 ಲೀಟರ್ ಕಳ್ಳಬಟ್ಟಿ ಹಾಗೂ 10 ಲೀಟರ್ ಕೋಳೆ ದೊರಕಿರುತ್ತದೆ. ಆರೋಪಿ ಮಂಜುನಾಥ ಸಂಗಿ ಸ್ಥಳದಿಂದ ತಪ್ಪಿಸಿಕೊಂಡಿರುತ್ತಾರೆ ಎಂದು ಅಬಕಾರಿ ಉಪನಿರೀಕ್ಷಕ ದೇವಾನಂದ್ ತಿಳಿಸಿದ್ದಾರೆ.