ನೈರುತ್ಯ ರೈಲ್ವೆಯಿಂದ ವಿವಿಧೆಡೆ ಫಿವರ್ ಕ್ಲಿನಿಕ್

Update: 2020-04-23 18:07 GMT

ಹುಬ್ಬಳ್ಳಿ, ಎ.23: ಕೋವಿಡ್-19 ಹಿನ್ನೆಲೆಯಲ್ಲಿ ಜ್ವರ, ಕೆಮ್ಮು, ನೆಗಡಿಯಂತಹ ಲಕ್ಷಣ ಹೊಂದಿದವರನ್ನು ತಪಾಸಣೆಗೆ ಒಳಪಡಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ನಗರದ ರೈಲ್ವೆ ಆಸ್ಪತ್ರೆಯಲ್ಲಿ ಹಾಗೂ ಬೆಂಗಳೂರು ಮತ್ತು ಮೈಸೂರಿನಲ್ಲಿ ಫಿವರ್ ಕ್ಲಿನಿಕ್ ಸ್ಥಾಪಿಸಲಾಗಿದೆ.

ಓರ್ವ ವೈದ್ಯ, ನರ್ಸ್, ಪ್ಯಾರಾಮೆಡಿಕಲ್ ಸಿಬ್ಬಂದಿ, ಫಾರ್ಮಾಸಿಸ್ಟ್‍ನವರು ಪಿಪಿಇ ಸೌಲಭ್ಯದೊಂದಿಗೆ ಕರ್ತವ್ಯ ನಿರ್ವಹಿಸಲಿದ್ದಾರೆ. ಹುಬ್ಬಳ್ಳಿಯ ಕೇಂದ್ರೀಯ ಆಸ್ಪತ್ರೆಯಲ್ಲಿ 149 ಬೆಡ್ಸ್, 8 ಐಸಿಯು ಬೆಡ್ಸ್ ಮತ್ತು ವೆಂಟಿಲೇಟರ್ ದೊಂದಿಗೆ 6 ಐಸಿಯು ಬೆಡ್ಸ್ ಗಳಿವೆ. ಅದೇ ರೀತಿ ಬೆಂಗಳೂರಿನಲ್ಲಿ 50 ಬೆಡ್ಸ್, 6 ಐಸಿಯು ಬೆಡ್ಸ್, 3 ವೆಂಟಿಲೇಟರ್ ಐಸಿಯು ಬೆಡ್, ಮೈಸೂರಿನಲ್ಲಿ 101 ಬೆಡ್ಸ್, 6 ಐಸಿಯು ಬೆಡ್ಸ್, 4 ವೆಂಟಿಲೇಟರ್ ಐಸಿಯು ಬೆಡ್‍ಗಳಿವೆ. ಫಿವರ್ ಕ್ಲಿನಿಕ್‍ಗಳನ್ನು ನೈಋತ್ಯ ರೈಲ್ವೆಯ ಇನ್ನಿತರೆ ಪ್ರದೇಶಗಳಲ್ಲೂ ಹೆಚ್ಚುವರಿಯಾಗಿ ಸ್ಥಾಪಿಸಲು ಯೋಜಿಸಲಾಗಿದೆ. ಈ ಸೌಲಭ್ಯ ರಾಜ್ಯ ಸರಕಾರ ಸೂಚಿಸಿದ ಸಾರ್ವಜನಿಕರಿಗೂ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News