ಸಜೀಪನಡು: ಜಮಾಅತ್ ವ್ಯಾಪ್ತಿಯ 730 ಮನೆಗಳಿಗೆ ರಮಝಾನ್ ಕಿಟ್ ವಿತರಣೆ

Update: 2020-04-27 12:52 GMT

ಬಂಟ್ವಾಳ, ಎ.27: ಲಾಕ್ ಡೌನ್ ನಿಂದಾಗಿ ಸಂಕಷ್ಟದದಲ್ಲಿರುವ ಕುಟುಂಬಗಳಿಗೆ ಸಜೀಪನಡು ಕೇಂದ್ರ ಜುಮಾ ಮಸೀದಿ ನೆರವಿನ ಹಸ್ತ ಚಾಚಿದ್ದು, ಜಮಾಅತ್ ವ್ಯಾಪ್ತಿಯ ಎಲ್ಲಾ ಮನೆಗಳಿಗೆ ರಮಝಾನ್ ಕಿಟ್ ವಿತರಣೆ ಮಾಡಲಾಯಿತು.

ಜಮಾಅತ್ ವ್ಯಾಪ್ತಿಯ ಸುಮಾರು 730 ಮನೆಗಳಿಗೆ ಅಗತ್ಯ ಸಾಮಾಗ್ರಿಗಳ ಕಿಟ್ ಗಳನ್ನು ಜಮಾಅತ್ ಅಧ್ಯಕ್ಷ ಹಾಜಿ ಅಬ್ದುಲ್ ರಝಾಕ್ ಅವರ ನೇತೃತ್ವದಲ್ಲಿ ವಿತರಣೆ ಮಾಡಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News