ಸಿದ್ದಾಪುರ: ಅಪ್ರಾಪ್ತ ಬಾಲಕಿಯ ಮಾನಭಂಗ ಯತ್ನ; ಪೋಕ್ಸೋ ಕಾಯ್ದೆಯಡಿ ಯುವಕನ ಬಂಧನ

Update: 2020-04-27 14:36 GMT

ಮಡಿಕೇರಿ, ಎ.27: ಮನೆಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಕೈ ಹಿಡಿದು ಎಳೆದು ಮಾನಭಂಗಕ್ಕೆ ಯತ್ನಿಸಿದ ಪ್ರಕರಣ ನೆಲ್ಯಹುದಿಕೇರಿಯ ಬೆಟ್ಟದಕಾಡು ಎಂಬಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ದೀಪಕ್ ಎಂಬಾತನನ್ನು ಪೋಕ್ಸೋ ಪ್ರಕರಣದಡಿ ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳ ಹಿಂದೆ ಅಪ್ರಾಪ್ತ ವಿದ್ಯಾರ್ಥಿನಿಯ ಅಪಹರಣ ಪ್ರಕರಣದಲ್ಲಿ ಬಂಧಿತನಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ದೀಪಕ್, ಇದೀಗ ಅಪ್ರಾಪ್ತ ಬಾಲಕಿಯ ಮಾನಭಂಗಕ್ಕೆ ಯತ್ನಿಸಿದ ಆರೋಪ ಎದುರಿಸುತ್ತಿದ್ದು, ಬಾಲಕಿಯ ಪಾಲಕರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆ ಆರೋಪಿ ದೀಪಕ್ ವಿರುದ್ಧ ಪೋಕ್ಸೊ 8 ಮತ್ತು 354ರಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

ಅಪ್ರಾಪ್ತ ಬಾಲಕಿಯ ಮಾನಭಂಗಕ್ಕೆ ಯತ್ನಿಸಿದ ದೀಪಕ್ ಮೇಲೆ ಗ್ರಾಮದ ಮೂವರು ಯುವಕರು ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾಗಿ ಆರೋಪಿ ನೀಡಿದ ದೂರಿನನ್ವಯ ಬೆಟ್ಟದಕಾಡಿನ ಜಾಬಿರ್, ಬಶೀರ್ ಮತ್ತು ನಜೀಬ್ ಎಂಬವರನ್ನೂ ಪೊಲೀಸರು ಬಂಧಿಸಿದ್ದು, ಸಿದ್ದಾಪುರ ಠಾಣಾಧಿಕಾರಿ ಮೋಹನ್‍ ರಾಜ್ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News