ಮೂಡಿಗೆರೆ: ಗುಂಡಿಕ್ಕಿ ಅಣ್ಣನ ಕೊಲೆ; ಆರೋಪಿ ತಮ್ಮನ ಬಂಧನ
Update: 2020-04-28 09:52 IST
ಚಿಕ್ಕಮಗಳೂರು, ಎ.28: ಆಸ್ತಿ ವಿಚಾರವಾಗಿ ಅಣ್ಣತಮ್ಮನ ಕಿತ್ತಾಟ ಓರ್ವನ ಕೊಲೆಯೊಂದಿಗೆ ಅಂತ್ಯಗೊಂಡ ಘಟನೆ ಮೂಡಿಗೆರೆ ತಾಲೂಕಿನ ಚೇಗು ಎಂಬ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿರುವುದು ವರದಿಯಾಗಿದೆ.
ಮೃತರನ್ನು ಚೇಗು ಗ್ರಾಮ ನಿವಾಸಿ ಮಂಜಯ್ಯ(58) ಎಂದು ಗುರುತಿಸಲಾಗಿದೆ. ಇವರ ತಮ್ಮ ಲಕ್ಷ್ಮಣ ಕೊಲೆ ಆರೋಪಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಆಸ್ತಿ ವಿಚಾರವಾಗಿ ಇವರೊಳಗೆ ವೈಮನಸ್ಸು ಮೊದಲು ಇತ್ತು. ನಿನ್ನೆ ರಾತ್ರಿ ಇವರೊಳಗೆ ಇದೇ ವಿಚಾರದಲ್ಲಿ ಗಲಾಟೆ ನಡೆದಿದೆಯೆನ್ನಲಾಗಿದೆ. ಈ ವೇಳೆ ಆರೋಪಿ ಲಕ್ಷ್ಮಣ ಅಣ್ಣ ಮಂಜಯ್ಯರ ಮೇಲೆ ಗುಂಡು ಹಾರಾಟ ನಡೆಸಿದನೆನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡ ಮಂಜಯ್ಯ ಕೊನೆಯುಸಿರೆಳೆದಿದ್ದಾರೆ.
ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವ ಬಣಕಲ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.