×
Ad

ರಾಜ್ಯದಲ್ಲಿಂದು 11 ಕೊರೋನ ಪಾಸಿಟಿವ್ ಪ್ರಕರಣ: 523ಕ್ಕೇರಿದ ಸೋಂಕಿತರ ಸಂಖ್ಯೆ

Update: 2020-04-28 17:33 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.28: ರಾಜ್ಯದಲ್ಲಿ ಇಂದು ಮತ್ತೆ 11 ಮಂದಿಯಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 523ಕ್ಕೇರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇಂದು ಸಂಜೆ ಬಿಡುಗಡೆಗೊಳಿಸಿರುವ ಆರೋಗ್ಯ ಬುಲೆಟ್‌ನಲ್ಲಿ ಸೋಮವಾರ ಸಂಜೆ 5ರಿಂದ ಇಂದು ಸಂಜೆ 5 ಗಂಟೆಯೊಳಗೆ ಹೊಸ 11 ಪ್ರಕರಣಗಳು ವರದಿಯಾಗಿರುವುದಾಗಿ ತಿಳಿಸಿದೆ.

ಈ ಪೈಕಿ ಆರು ಪ್ರಕರಣಗಳು ಕಲಬುರಗಿಯಲ್ಲಿ ಪತ್ತೆಯಾಗಿದೆ. ಇವರಲ್ಲಿ ಐವರು ಮಹಿಳೆಯರಾಗಿದ್ದಾರೆ. ಉಳಿದಂತೆ ಬಾಗಲಕೋಟೆಯಲ್ಲಿ ಮೂರು, ಬೆಂಗಳೂರು ನಗರ ಮತ್ತು ಗದಗದಲ್ಲಿ ತಲಾ ಒಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. 

ಒಟ್ಟಾರೆ ಇದುವರೆಗೆ ರಾಜ್ಯದಲ್ಲಿ ಪಾಸಿಟಿವ್ ಬಂದ 523 ಪ್ರಕರಣಗಳಲ್ಲಿ 207 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 20 ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News