ಗದಗ: ಸೋಂಕು ನಿವಾರಕ ಟನಲ್ ತಯಾರಿಸಿದ ಎಸೆಸೆಲ್ಸಿ ವಿದ್ಯಾರ್ಥಿ

Update: 2020-04-28 14:25 GMT

ಗದಗ, ಎ.28: ಕೊರೋನ ವೈರಸ್ ನಿಯಂತ್ರಿಸಲು ಎಸೆಸೆಲ್ಸಿ ವಿದ್ಯಾರ್ಥಿಯೋರ್ವ ಸೋಂಕು ನಿವಾರಕ ಟನಲ್ ಆವಿಷ್ಕಾರ ಮಾಡಿ ಎಲ್ಲರ ಗಮನ ಸೆಳೆದಿದ್ದಾನೆ.

ಗದಗದ ಹೆಲ್ತ್ ಕ್ಯಾಂಪ್ ಕಬಾಡಿ ಚಾಳ್ ನಿವಾಸಿಯಾಗಿರುವ ಶ್ರೀನಾಥ್ ರಂಗರೇಜ್ ಎಂಬ ವಿದ್ಯಾರ್ಥಿ ತನ್ನ ಅಕ್ಕ ಪೂಜಾಳ ಸಹಾಯದೊಂದಿಗೆ ಮನೆಯಲ್ಲಿನ ವಸ್ತುಗಳನ್ನೇ ಬಳಸಿಕೊಂಡು ತಾನೇ ಸೋಂಕು ನಿವಾರಕ ಟನಲ್ ಕಂಡುಹಿಡಿದಿದ್ದಾನೆ.

ಬಾಗಿಲು ರೀತಿಯಲ್ಲಿ ಇರುವ ಈ ಸಾಧನವನ್ನು ಪೈಪ್‍ಗಳಿಂದ ನಿರ್ಮಿಸಲಾಗಿದೆ. ಇದು 7 ಅಡಿ ಎತ್ತರ, 3 ಅಡಿ ಅಗಲ ಇರುತ್ತೆ. ಜೊತೆಗೆ 50 ಅಡಿ ಸ್ಪ್ರಿಂಕಲ್ ಟ್ಯೂಬ್ ಅನ್ನು ಅಳವಡಿಸಲಾಗಿದೆ. 11 ಮೀ. ಪ್ಲಾಸ್ಟಿಕ್ ಕವರ್ ಅನ್ನು ಸುತ್ತಲೂ ಹೊಂದಿಸಲಾಗಿದೆ. ಜೊತೆಗೆ ಸಿಂಪಡಣೆಗೆ 1/2 PHK ಮೋಟರ್ ಅನ್ನು ಅಳವಡಿಸಲಾಗಿದೆ. ಇನ್ನು 1 ಪೆಡಲ್ ಜೊತೆಗೆ ಮನೆಯಲ್ಲಿನ ಅಡುಗೆ ಪದಾರ್ಥಗಳನ್ನ ಬಳಸಿಕೊಂಡು ಸಾನಿಟೈಸರ್ ತಯಾರಿಸಿ ಸಿಂಪಡಣೆ ಮಾಡಲಾಗುತ್ತದೆ. ಇದನ್ನು ಜನರು ಗುಂಪು ಗುಂಪಾಗಿ ಸೇರುವ ಕಾರ್ಯಕ್ರಮಗಳಲ್ಲಿ ಅಳವಡಿಸುವ ಮೂಲಕ ಅದರಲ್ಲಿ ಹಾದು ಹೋಗುವವರಿಗೆ ತನ್ನಷ್ಟಕ್ಕೆ ತಾನೇ ಸಾನಿಟೈಸರ್ ಅನ್ನು ಸಿಂಪಡಣೆ ಮಾಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News