ಪಾಲಿಥಿನ್ ಕವರ್ ಬದಲು ಬಾಕ್ಸ್ ಗಳಲ್ಲಿ ಊಟ ವಿತರಿಸಿ: ಸರಕಾರದ ಆದೇಶ
Update: 2020-04-28 19:59 IST
ಬೆಂಗಳೂರು, ಎ. 28: ಪಾಲಿಥಿನ್ ಕವರ್ ಗಳಲ್ಲಿ ಬದಲಾಗಿ ಪ್ಲಾಸ್ಟಿಕ್ ಬಾಕ್ಸ್ ಗಳಲ್ಲಿ ಆಹಾರ ಮತ್ತು ಊಟ ವಿತರಿಸುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಕೋವಿಡ್-19 ರ ಸಂಕಷ್ಟದ ಕಾಲದಲ್ಲಿ ಸರ್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳು ಮಾತ್ರವಲ್ಲದೆ, ವಿವಿಧ ಸಂಸ್ಥೆಗಳು ಹಾಗೂ ಸಂಘಟನೆಗಳು ಕಾರ್ಮಿಕರಿಗೆ ಪಾಲಿಥಿನ್ ಕವರ್ ಗಳಲ್ಲಿ ಊಟ ಒದಗಿಸುತ್ತಿದೆ. ಆದರೆ, ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಪಾಲಿಥಿನ್ ಕವರ್ ಗಳ ಬದಲಾಗಿ ಆಹಾರ ಅಥವಾ ಊಟವನ್ನು ಪ್ಲಾಸ್ಟಿಕ್ ಬಾಕ್ಸ್ ಗಳಲ್ಲಿ ಸರಬರಾಜು ಮಾಡುವಂತೆ ಸರಕಾರ ಆದೇಶದಲ್ಲಿ ತಿಳಿಸಿದೆ.