×
Ad

ಗರ್ಭಿಣಿಯರ ಆರೋಗ್ಯ ರಕ್ಷಣೆಗೆ ಸರಕಾರದಿಂದ ಹೊಸ ಗೈಡ್‍ಲೈನ್ಸ್ ಜಾರಿ

Update: 2020-04-29 22:58 IST

ಬೆಂಗಳೂರು, ಎ.29: ರಾಜ್ಯದಲ್ಲಿ ಕೊರೋನ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಗರ್ಭಿಣಿಯರ ಆರೋಗ್ಯದ ದೃಷ್ಟಿಯಿಂದ ರಾಜ್ಯ ಸರಕಾರ ಹೊಸ ಗೈಡ್‍ಲೈನ್ಸ್ ವೊಂದನ್ನು ಹೊರಡಿಸಿದ್ದು, ಕೊರೋನ ಹಾಟ್‍ಸ್ಪಾಟ್, ಸೀಲ್‍ಡೌನ್ ಏರಿಯಾದ ಗರ್ಭಿಣಿಯರ ಪಟ್ಟಿ ಸಿದ್ಧ ಮಾಡಿಕೊಳ್ಳುವುದು ಸೇರಿ ಇನ್ನಿತರ ಗೈಡ್‍ಲೈನ್ಸ್ ಗಳನ್ನು ಹೊರಡಿಸಿದೆ.

ಗರ್ಭಿಣಿಯರಿಗೆ ತೊಂದರೆಯಾಗದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು 24 ಗಂಟೆ ಓಪನ್ ಮಾಡಬೇಕು. ಕೊರೋನ ಹಾಟ್ ಸ್ಪಾಟ್, ಸೀಲ್‍ಡೌನ್ ಏರಿಯಾದ ಗರ್ಭಿಣಿಯರ ಪಟ್ಟಿ ಸಿದ್ಧ ಮಾಡಿಕೊಳ್ಳಬೇಕೆಂದು ಸರಕಾರ ಹೊಸ ಗೈಡ್‍ಲೈನ್ಸ್ ಹೊರಡಿಸಿದೆ.

ಗರ್ಭಿಣಿ ಸ್ತ್ರೀಯರ ಆರೋಗ್ಯ ತಪಾಸಣೆ ಮನೆಯಲ್ಲೇ ಮಾಡಬೇಕು. ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಸಿದ್ಧರಿರಬೇಕು. ಈ ರೀತಿ ಕೆಲ ಕ್ರಮಗಳನ್ನು ಪಾಲಿಸಲು ಸರಕಾರ ನಿರ್ಧರಿಸಿದೆ.

ಜೊತೆಗೆ ಅವರ ಹೆರಿಗೆ ದಿನಾಂಕದ ಬಗ್ಗೆ ಮಾಹಿತಿ ಕಲೆಹಾಕಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಬೇಕು. ಸಾಮಾನ್ಯ ಪರೀಕ್ಷೆ ಜೊತೆಗೆ ಕೊರೋನ ಸೋಂಕಿನ ಲಕ್ಷಣದ ಬಗ್ಗೆ ನಿಗಾ ವಹಿಸಬೇಕೆಂದು ತಿಳಿಸಿದೆ.

ಪರೀಕ್ಷೆ ವೇಳೆ ಕೊರೋನ ಪಾಸಿಟಿವ್ ಇದ್ದ ಗರ್ಭಿಣಿಯರಿಗೆ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ ಮತ್ತು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು. ಗರ್ಭಿಣಿಯರಿರುವ ವಲಯದ ಜಿಲ್ಲಾಸ್ಪತ್ರೆಗಳಲ್ಲಿ ವಿಶೇಷ ವಾರ್ಡ್‍ನಲ್ಲಿ ಚಿಕಿತ್ಸೆಗೆ ಸೂಚಿಸಲಾಗಿದೆ. ಖಾಸಗಿ ಆಸ್ಪತ್ರೆಗಳು ಬಂದ್ ಆಗಿರೋ ಹಿನ್ನೆಲೆಯಲ್ಲಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಗರ್ಭಿಣಿಯರ ಚಿಕಿತ್ಸೆಗೆ ಸಿದ್ಧರಿರಬೇಕು ಎಂದು ತಿಳಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News