×
Ad

ರಾಜ್ಯ ಹೈಕೋರ್ಟ್ ಗೆ ಐವರು ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕ

Update: 2020-04-30 21:51 IST

ಬೆಂಗಳೂರು, ಎ.30: ರಾಜ್ಯ ಹೈಕೋರ್ಟ್ ಗೆ ಐವರು ನೂತನ ಹೆಚ್ಚುವರಿ ನ್ಯಾಯಮೂರ್ತಿಗಳು ನೇಮಕಗೊಂಡಿದ್ದಾರೆ.

ಹಿರಿಯ ವಕೀಲರಾದ ಶಿವಶಂಕರ್ ಅಮರಣ್ಣವರ್, ಎಂ.ಜಿ.ಉಮಾ, ವಿ.ಶ್ರೀಶಾನಂದ, ಎಚ್.ಸಂಜೀವ್‍ ಕುಮಾರ್, ಪಿ.ಎನ್.ದೇಸಾಯಿ ನೇಮಕಗೊಂಡಿರುವ ನೂತನ ನ್ಯಾಯಮೂರ್ತಿಗಳು.

ಸಂವಿಧಾನದ 224ನೆ ಪರಿಚ್ಛೇದದ 1ನೆ ಉಪನಿಯಮದ ಅನುಸಾರ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಎರಡು ವರ್ಷಗಳ ಅವಧಿಗೆ ನೇಮಕಗೊಳಿಸಿ ರಾಷ್ಟ್ರಪತಿಗಳ ಕಚೇರಿ ಆದೇಶ ಹೊರಡಿಸಿದೆ.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News