×
Ad

ಮಡಿಕೇರಿ: ಈಜಲು ತೆರಳಿದ್ದ ಸೈನಿಕ ಸೇರಿ ಇಬ್ಬರು ನೀರಿನಲ್ಲಿ ಮುಳುಗಿ ಮೃತ್ಯು

Update: 2020-05-01 21:11 IST
ಸಾಂದರ್ಭಿಕ ಚಿತ್ರ

ಮಡಿಕೇರಿ, ಮೇ.1: ಉತ್ತರ ಕೊಡಗು ಸೋಮವಾರಪೇಟೆ ತಾಲೂಕಿನ ಗಡಿಭಾಗ, ಹಾಸನ ಜಿಲ್ಲೆಯ ಅರಗೂಡು ತಾಲೂಕಿನ ಮಲ್ಲಿಪಟ್ಟಣ ಬಳಿಯ ಕಟ್ಟೆಪುರದ ಹೇಮಾವತಿ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಸೈನಿಕ ಸೇರಿದಂತೆ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಘಟನೆಯಲ್ಲಿ ಹಾಸನದ ಅರಕಲಗೂಡುವಿನ ನಂಜಪ್ಪ ಎಂಬವರ ಪುತ್ರ, ಸೈನಿಕ ಲೋಕೇಶ್(28) ಮತ್ತು ಬೆಸೂರಿನ ನಿಲುವಾಗಿಲಿನ ಶಾಂತರಾಜು ಎಂಬವರ ಪುತ್ರ ಲತೀಶ್ ಸಾವನ್ನಪ್ಪಿದ್ದಾರೆ.

ಬೆಸೂರಿನ ನಿಲುವಾಗಿಲಿಗೆ ಆಗಮಿಸಿದ್ದ ಲೋಕೇಶ್ ಇಂದು ಲತೀಶ್‍ನೊಂದಿಗೆ ಹೇಮಾವತಿ ಹಿನ್ನೀರಿನಲ್ಲಿ ಈಜಲು ತೆರಳಿದ್ದರು. ಈ ಸಂದರ್ಭ ಇವರಿಬ್ಬರು ಮುಳುಗಿ ಸಾವನ್ನಪ್ಪಿದ್ದಾರೆ. ಇಬ್ಬರ ಮೃತ ದೇಹಗಳನ್ನು ಅರಣ್ಯ ಇಲಾಖೆ, ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಸಾರ್ವಜನಿಕರ ಸಹಕಾರದೊಂದಿಗೆ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News