"ಯಾರು ನೀನು ಮಾನವಾ...ಕೇಳುತಿಹುದು ಕೊರೋನ...": ಸಿಎಂ ಗೃಹ ಕಚೇರಿಯಲ್ಲಿ ಯೋಗರಾಜ ಭಟ್ಟರ ಹಾಡು ಬಿಡುಗಡೆ
Update: 2020-05-02 20:20 IST
ಬೆಂಗಳೂರು, ಮೇ.2: ಕೋವಿಡ್ 19 ತಡೆಯಲು ಹಗಲಿರುಳು ಶ್ರಮಿಸುತ್ತಿರುವ ಕೊರೋನ ಯೋಧರಿಗೆ ಧನ್ಯವಾದಗಳನ್ನು ಅರ್ಪಿಸುವ, ವೀಡಿಯೋ ಹಾಡನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ತಮ್ಮ ಗೃಹ ಕಚೇರಿ ಕೃಷ್ಣಾ ದಲ್ಲಿ ಬಿಡುಗಡೆ ಮಾಡಿದರು.
ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್ ರಚಿಸಿ, ನಿರ್ದೇಶನ ಮಾಡಿರುವ ವಿಡಿಯೋ ಇದಾಗಿದೆ. ಬಿಡುಗಡೆ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್, ಗಾಯಕರಾದ ವಿಜಯ್ ಪ್ರಕಾಶ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಝೀ ಕನ್ನಡ ವಾಹಿನಿಯ ರಾಘವೇಂದ್ರ ಹುಣಸೂರ್ ಉಪಸ್ಥಿತರಿದ್ದರು.
ವಿಡಿಯೋ ಇಲ್ಲಿದೆ...