ಲಾಕ್‍ಡೌನ್: ರಾಜ್ಯದಲ್ಲಿ ಮೇ.17ರವರೆಗೂ ರೈಲು ಸೇವೆ ಇಲ್ಲ

Update: 2020-05-03 17:09 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ.3: ಮೂರನೇ ಹಂತದ ಲಾಕ್‍ಡೌನ್ ಮುಂದೂಡಿದ ಹಿನ್ನಲೆಯಲ್ಲಿ ರೈಲ್ವೆ ಇಲಾಖೆಯು ರೈಲು ರದ್ದತಿಯನ್ನು ಮೇ.17 ರವರೆಗೆ ಮುಂದಯುವರೆಸಲು ನಿರ್ಧರಿಸಿದೆ.

ಈಗಾಗಲೇ ಲಾಕ್‍ಡೌನ್ ವೇಳೆ ಸರಕು ಮತ್ತು ಪಾರ್ಸೆಲ್ ಸೇವೆಗಳನ್ನು ರೈಲ್ವೆ ಆರಂಭಿಸಿದೆ. ಅಲ್ಲದೆ ಲಾಕ್‍ಡೌನ್‍ನಿಂದ ಬೇರೆ ಊರುಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ವಿವಿಧ ವ್ಯಕ್ತಿಗಳನ್ನು ಕರೆತರಲು ವಿಶೇಷ ರೈಲುಗಳ ಸಂಚಾರ ಆರಂಭಿಸಲು ರೈಲ್ವೆ ಇಲಾಖೆ ಚಿಂತನೆ ನಡೆಸಿದೆ. 

ರಾಜ್ಯ ಸರಕಾರದ ಸೂಚನೆಯ ಮೇರೆಗೆ ಮಾತ್ರ ಸರ್ಕಾರ ಸೂಚಿಸಿದ ಪ್ರದೇಶಗಳಲ್ಲಿ ಮಾತ್ರ ವಿಶೇಷ ರೈಲುಗಳು ಸಂಚರಿಸುತ್ತವೆ. ತಮ್ಮ ರಾಜ್ಯಗಳಿಗೆ ಹೋಗಲು ಬಯಸುವವರು ರಾಜ್ಯ ಸರಕಾರವನ್ನು ಸಂಪರ್ಕಿಸಬಹುದು. ತಮ್ಮ ರಾಜ್ಯಗಳಿಗೆ ಪ್ರಯಾಣಿಸಲು ಇಚ್ಛಿಸುವ ಪ್ರಯಾಣಿಕರಿಗೆ ರೈಲ್ವೆ ನಿಲ್ದಾಣದಲ್ಲಿ ಯಾವುದೇ ಟಿಕೆಟ್ ನೀಡಲಾಗುವುದಿಲ್ಲ. ಆದ್ದರಿಂದ ಯಾವುದೇ ಪ್ರಯಾಣಿಕರು ರೈಲ್ವೆ ನಿಲ್ದಾಣಕ್ಕೆ ಬರಬಾರದು ಎಂದು ಪ್ರಕಟನೆಯಲ್ಲಿ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News