ಮುಂದಿನ ವರ್ಷದಿಂದ ಬಿತ್ತನೆ ಬೀಜಕ್ಕೆ ಏಕರೂಪ ಬೆಲೆ: ಕೃಷಿ ಸಚಿವ ಬಿ.ಸಿ.ಪಾಟೀಲ್
ಕಾರವಾರ, ಮೇ 4: ಮುಂದಿನ ವರ್ಷದಿಂದ ರೈತರಿಗೆ ಬೇಕಾದ ಬಿತ್ತನೆ ಬೀಜಕ್ಕೆ ಸರ್ಕಾರವೇ ಬೆಲೆ ನಿಗದಿಪಡಿಸಲಿದ್ದು, ಏಕರೂಪ ಬೆಲೆ ಜಾರಿಯಾಗಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಶಿರಸಿಯ ಅಂಬೇಡ್ಕರ್ ಭವನದಲ್ಲಿ ನಡೆದ ಕೋವಿಡ್-19 ಸಾಂಕ್ರಾಮಿಕ ಲಾಕ್ಡೌನ್ ಹಿನ್ನಲೆಯಲ್ಲಿ ಕೃಷಿ, ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಸಚಿವರು ಮಾತನಾಡುತ್ತಿದ್ದರು.
ಫಸಲ್ ಭೀಮಾ ಯೋಜನೆಯದ್ದು ಸಮಸ್ಯೆಯಾಗಿದೆ. ಇದಕ್ಕಾಗಿ ಹೊಸ ತಂತ್ರಾಂಶ ಅಳವಡಿಕೆ ಜಾರಿಯಲ್ಲಿದ್ದು, ಕಂತು ಪಾವತಿಸಿದ ರೈತರಿಗೆ ಯಾವುದೇ ರೀತಿಯ ಅನ್ಯಾಯ ಆಗದಂತೆ ವಿಮೆ ಬರಲು ಸೂಕ್ತ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಯಾವುದೇ ಕಂಪೆನಿಯ ಬಿತ್ತನೆ ಬೀಜ
ಐಸಿಸಿಎಯಲ್ಲಿ ರಿಜಿಸ್ಟರ್ ಆದ ಬಿತ್ತನೆಬೀಜ ರಸಗೊಬ್ಬರವನ್ನು ಮಾತ್ರವೇ ಮಾರಾಟ ಮಾಡಬೇಕು.ಅಕ್ರಮ, ಕಳಪೆ, ಗುಣಮಟ್ಟರಹಿತ ಬೀಜ ಪತ್ತೆ ಮಾಡಿ ರೈತರಿಗೆ ಉಪಯೋಗಕಾರಿ ಕೆಲಸ ಮಾಡುವುದು ನಮ್ಮ ಕರ್ತವ್ಯ ಎಂದರು.
ಲಾಕ್ಡೌನ್ ಸಂದರ್ಭದಲ್ಲಿ ಯಾವುದೇ ಚಟುವಟಿಕೆ ಸ್ಥಗಿತಗೊಂಡಿದ್ದರೂ ಕೃಷಿ ಚಟುವಟಿಕೆ ಸ್ಥಗಿತಗೊಂಡಿಲ್ಲ. ಯಾವುದೇ ಕಾರಣಕ್ಕೂ ರೈತರಿಗೆ ಬೀಜ ಗೊಬ್ಬರದ ಬಿತ್ತನೆ ಬೀಜ ರಸಗೊಬ್ಬರ ನಮ್ಮಲ್ಲಿ ದಾಸ್ತಾನು ಇದೆ. ಯಾವುದೇ ಕೊರತೆಯಿಲ್ಲ. ಅವಶ್ಯಕತೆಗೆ ತಕ್ಕಂತೆ ಗೊಬ್ಬರ ಬಿತ್ತನೆ ಬೀಜ ಪೂರೈಸಲಾಗುವುದು ಎಂದರು..
ಶಿವರಾಮ್ ಹೆಬ್ಬಾರ್ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಅದರಲ್ಲಿಯೂ ಉತ್ತರ ಕರ್ನಾಟಕ ಜಿಲ್ಲೆ ಹಲವಾರು ಯೋಜನೆಗಳಿಗೆ ತ್ಯಾಗ ಮಾಡಿದ ಜಿಲ್ಲೆ.ಜಿಲ್ಲೆಗೆ ಕೃಷಿಯಲ್ಲಿ ವಿಶೇಷ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು.
ಶಾಸಕರಾದ ರೂಪಾಲಿ ನಾಯಕ್, ಸುನೀಲ್ ನಾಯಕ್, ಅಶಿಸರ ಹೆಗಡೆ, ಮೇಲ್ಮನೆ ಸದಸ್ಯ
ಜಿಲ್ಲಾಧಿಕಾರಿ ಹರೀಶ್ ಕುಮಾರ್, ಜಿಲ್ಲಾ ಕಾರ್ಯನಿರ್ವಹಣಾಧಿಕಾರಿ ರೋಷನ್, ರೈತ ಪ್ರತಿನಿಧಿಗಳು ಉಪಸ್ಥಿತರಿದ್ದರು.