ಕಲಬುರಗಿ: ಮಧ್ಯಾಹ್ನದಿಂದ ಮದ್ಯ ಮಾರಾಟ ಆರಂಭ
ಕಲಬುರಗಿ, ಮೇ 4: ಆರೆಂಜ್ ಝೋನ್ ವ್ಯಾಪ್ತಿಯಲ್ಲಿರುವ ಕಲಬುರಗಿ ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನದಿಂದ ಮದ್ಯ ಮಾರಾಟಕ್ಕೆ ಜಿಲ್ಲಾಧಿಕಾರಿ ಶರತ್ ಬಿ. ಅವಕಾಶ ಮಾಡಿಕೊಟ್ಟಿದ್ದಾರೆ.
ರಾಜ್ಯದ ಎಲ್ಲ ಕಡೆಗಳಂತೆ ಇಲ್ಲಿಯೂ ಮದ್ಯ ಮಾರಾಟ ನಡೆಯುತ್ತದೆ ಎಂದು ತಿಳಿದಿದ್ದ ಬಹುತೇಕ ಮದ್ಯ ಪ್ರಿಯರು ವೈನ್ ಶಾಪ್ ಗಳ ಮುಂದೆ ಬಂದು ನಿಂತಿದ್ದರು. ಆದರೆ ಜಿಲ್ಲಾಧಿಕಾರಿ ಅನುಮತಿ ನೀಡಿರಲಿಲ್ಲ. ಆದರೆ ಜಿಲ್ಲೆಯಲ್ಲಿ ಕಂಟೋನ್ಮೆಂಟ್ ಝೋನ್‌ಗಳು ಹೊರತುಪಡಿಸಿ ಇಂದಿನಿಂದ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಅಬಕಾರಿ ಇಲಾಖೆ ಅಧಿಕಾರಿಯವರು, ವೈನ್ ಶಾಪ್ ಗಳ ಸ್ಟಾಕ್ ಲಿಸ್ಟ್ ಪಡೆಯುತ್ತಿರುವುದು ಕಂಡು ಬಂದಿತು.
ಈ ವೇಳೆಯಲ್ಲಿ ಮದ್ಯಪ್ರಿಯರು ಯಾವಾಗ ವೈನ್ ಶಾಪ್ ತೆರೆಯುತ್ತದೆ ಎಂದು ಕಾದು ಕುಳಿತಿರುವುದು ಕಂಡು ಬಂದಿತು. ಇಂದು ಮಧ್ಯಾಹ್ನದಿಂದ ಮದ್ಯ ಮಾರಾಟ ಆರಂಭವಾಗಿದ್ದು,
ಬಟ್ಟೆ ಅಂಗಡಿ ಹೊರತುಪಡಿಸಿ ಬಹುತೇಕ ವ್ಯಾಪಾರ ವಹಿವಾಟ ಪ್ರಾರಂಭವಾಗಿವೆ. ಆಟೋ, ಬಸ್ ಸಂಚಾರ ಬಗ್ಗೆ ಸಂಜೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.