ಮಂಡ್ಯ: ಮತ್ತಿಬ್ಬರಿಗೆ ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 28ಕ್ಕೆ ಏರಿಕೆ

Update: 2020-05-04 12:31 GMT

ಮಂಡ್ಯ, ಮೇ 4: ಜಿಲ್ಲೆಯಲ್ಲಿ ಮತ್ತಿಬ್ಬರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಕೊರೋನ ಸೋಂಕಿತರ ಸಂಖ್ಯೆ 28ಕ್ಕೆ ಏರಿದೆ. ಕೆ.ಆರ್.ಪೇಟೆ ತಾಲೂಕಿನ ಇಬ್ಬರು ಯುವತಿಯರಿಗೆ ಕೊರೋನ ಸೋಂಕು ಖಚಿತವಾಗಿದೆ.

ಮುಂಬೈನಿಂದ ಬಂದಿದ್ದ 19 ಮತ್ತು 20 ವರ್ಷದ ಇಬ್ಬರು ಯುವತಿಯರಿಗೆ ಕೊರೋನ ಸೋಂಕು ದೃಢಪಟ್ಟಿದೆ.

ಮೊನ್ನೆಯಷ್ಟೆ ಮುಂಬೈ ಶವಸಂಸ್ಕಾರದ ಪ್ರಕರಣದಲ್ಲಿ 4 ಜನರಿಗೆ ಕೊರೋನ ಸೋಂಕು ಕಂಡಿತ್ತು. ನಾಗಮಂಗಲದ ವ್ಯಕ್ತಿಗೂ ಸೋಂಕು ಕಂಡಿತ್ತು. ಮಳವಳ್ಳಿ, ಮಂಡ್ಯ, ನಾಗಮಂಗಲ, ಪಾಂಡವಪುರದ ಬಳಿಕ ಇದೀಗ ಕೆ.ಆರ್.ಪೇಟೆಗೂ ಹರಡಿದೆ.

ಸೋಂಕಿತರ ಹೆಚ್ಚಳದಿಂದ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ.

ಈ ಮೊದಲು ಕೊರೋನ ಸೋಂಕಿತರಲ್ಲಿ ನಾಲ್ಕು ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಸೋಮವಾರ ಮೂವರು ಬಿಡುಗಡೆಯಾಗಿದ್ದಾರೆ. 21 ಮಂದಿ ಸೋಂಕಿತರು ಮಿಮ್ಸ್ ಆಸ್ಪತ್ರೆಯ ಐಸೋಲೇಷನ್ ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News