×
Ad

ರಾಜ್ಯದಲ್ಲಿ ಒಂದೇ ದಿನ 45 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ

Update: 2020-05-04 22:15 IST

ಬೆಂಗಳೂರು, ಮೇ 4: ಇಂದು ಬೆಳಗ್ಗೆ 9ರಿಂದ ಸಂಜೆ 7ರವರೆಗೆ ನಡೆದ ಮದ್ಯ ಮಾರಾಟದಲ್ಲಿ ಅಂದಾಜು 3.9 ಲಕ್ಷ ಲೀಟರ್ ಬಿಯರ್ ಮತ್ತು 8.5 ಲಕ್ಷ ಲೀಟರ್ ಭಾರತೀಯ ತಯಾರಿಕಾ ಮದ್ಯ ಮಾರಾಟವಾಗಿದ್ದು, ಅಂದಾಜು ಮೌಲ್ಯ ಸುಮಾರು 45 ಕೋಟಿ ರೂ. ಆಗಿದೆ ಎಂದು ಅಬಕಾರಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.    

ಸನ್ನದು ಮಳಿಗೆಯಲ್ಲಿ ಕೇವಲ ಐದು ಜನರು ಮಾತ್ರ ಗ್ರಾಹಕರು ಇರುವಂತೆಯೂ ಹಾಗೂ ಸಾಮಾಜಿಕ ಅಂತರವಾದ 6 ಅಡಿಗಳಿಗೆ ಕಡಿಮೆ ಇಲ್ಲದಂತೆ ಕಾಪಾಡಿಕೊಳ್ಳಬೇಕು. ಮದ್ಯ ಮಾರಾಟ ಮಾಡುವ ಸನ್ನದಿಯಲ್ಲಿ ನೌಕರರು ಗ್ಲೌಸ್ ಅನ್ನು ಧರಿಸುವುದು ಹಾಗೂ ಮದ್ಯ ಖರೀದಿಗೆ ಬರುವ ಗ್ರಾಹಕರು ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸುವುದು ಹಾಗೂ ಸ್ಯಾನಿಟೈಸರ್ ಅನ್ನು ಬಳುಸುವುದು. 

ಈಗಾಗಲೇ ಕೆಎಸ್‍ಬಿಸಿಎಲ್ ಡಿಪೋಗಳಲ್ಲಿ ಸಾಕಷ್ಟು ಮದ್ಯ ದಾಸ್ತಾನು ಇದೆ. ಹಾಗೂ ಡಿಸ್ಟಿಲರಿ ಮತ್ತು ಬ್ರೀವರಿಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಅಬಕಾರಿ ಆಯುಕ್ತರ ಸೂಚನೆಯ ಮೇರೆಗೆ ಜಿಲ್ಲಾ ಮಟ್ಟದಲ್ಲಿ ಅಬಕಾರಿ ಅಧಿಕಾರಿಗಳು ಸಿಎಲ್-2 ಮತ್ತು ಸಿಎಲ್-11(ಸಿ) ಸನ್ನದುದಾರರ ಸಭೆಯನ್ನು ಕರೆದು ಈಗಾಗಲೇ ತಿಳುವಳಿಕೆಯನ್ನು ನೀಡಲಾಗಿದೆ.

ಮೇ 4ರಿಂದ 3500 ಸಿಎಲ್-2 ಮತ್ತು 700 ಸಿಎಲ್-11(ಸಿ)(ಎಂಎಸ್‍ಐಎಲ್) ಸನ್ನದನ್ನು ಬೆಳಗ್ಗೆ 9ರಿಂದ ಸಂಜೆ 7ರವರೆಗೆ ತೆರೆಯಲಾಗಿದ್ದು, ಎಂಆರ್‍ಪಿ ಉಲ್ಲಂಘಿಸಿ ಮಾರಾಟ ಮಾಡಿದ ಬಗ್ಗೆ ದೂರುಗಳು ಬಂದರೆ ಪರಿಶೀಲಿಸಿ ಅಮಾನತ್ತು ಒಳಗೊಂಡಂತೆ ಕಾನೂನಿನ್ವಯ ಕ್ರಮ ಕೈಗೊಳ್ಳಲಾಗುವುದು. ಮೇ 4ರಂದು ಒಂದೇ ದಿನಕ್ಕೆ ಸುಮಾರು 45 ಕೋಟಿ ರೂ.ಗಳ ಮದ್ಯ ಮಾರಾಟವಾಗಿದೆ ಎಂದು ಅಬಕಾರಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News