×
Ad

ಆನ್‍ಲೈನ್ ಮೂಲಕ ತರಗತಿಗಳು ಪ್ರಾರಂಭ

Update: 2020-05-04 22:56 IST

ರಾಮನಗರ, ಮೇ 4: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2019-20ನೇ ಶೈಕ್ಷಣಿಕ ಸಾಲಿನ ಜುಲೈ ಮತ್ತು ಜನವರಿ ಆವೃತ್ತಿಯಲ್ಲಿ ಪ್ರವೇಶಾತಿ ಪಡೆದಿರುವ ಪ್ರಥಮ ಬಿ.ಎ., ಬಿ.ಕಾಂ., ಹಾಗೂ 2018-19ನೇ ಶೈಕ್ಷಣಿಕ ಸಾಲಿನ ದ್ವಿತೀಯ ಬಿ.ಎ., ಬಿ.ಕಾಂ., ವಿದ್ಯಾರ್ಥಿಗಳಿಗೆ ಮೇ 1ರಿಂದ ಆನ್‍ಲೈನ್ ಮುಖಾಂತರ ಸಂಪರ್ಕ ತರಗತಿಗಳು ಪ್ರಾರಂಭವಾಗಿದೆ. ಈಗಾಗಲೇ ಎಲ್ಲಾ ವಿದ್ಯಾರ್ಥಿಗಳ ಸಂಚಾರಿ ದೂರವಾಣಿ ಸಂಖ್ಯೆಗಳಿಗೆ ಸುದ್ದಿಯನ್ನು ರವಾನಿಸಲಾಗಿದೆ.

ತರಗತಿಗಳ ವೇಳಾಪಟ್ಟಿಯು ಕರಾಮುವಿಯ ವೆಬ್‍ಸೈಟ್ www.ksoumysuru.ac.in ಹಾಗೂ ಕೆಎಸ್‍ಒಯು ಸ್ಟೂಡೆಂಟ್ ಆಪ್ ನಲ್ಲಿ ಲಭ್ಯವಿದೆ.

ವಿದ್ಯಾರ್ಥಿಗಳು ವೆಬ್‍ಸೈಟ್‍ನಲ್ಲಿ ಪ್ರಸಾರವಾಗುವ ತರಗತಿಗಳನ್ನು ಕೇಳಬಹುದು ಹಾಗೂ ವೀಕ್ಷಿಸಬಹುದು. ಇದರ ಸದುಪಯೋಗವನ್ನು ಹೆಚ್ಚಿನ ವಿದ್ಯಾರ್ಥಿಗಳು ಪಡೆಯಬೇಕೆಂದು ಪ್ರಾದೇಶಿಕ ನಿರ್ದೇಶಕ ಡಾ. ವಿಜಯ್ ಪ್ರಕಾಶ್ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆ, ಬಿ.ಎಂ. ರಸ್ತೆ, ರಾಮನಗರ ದೂ.ಸಂಖ್ಯೆ: 9986458055, 8861732487, 8660460261 ಮತ್ತು 9743184848 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News