×
Ad

ಕೋವಿಡ್-19: ರಾಜ್ಯದಲ್ಲಿ ಇಂದು 20 ಪ್ರಕರಣಗಳು ಪಾಸಿಟಿವ್

Update: 2020-05-06 17:35 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ.6: ರಾಜ್ಯದಲ್ಲಿ ಇಂದು ಮತ್ತೆ 20 ಮಂದಿಯಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 693ಕ್ಕೇರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇಂದು ಸಂಜೆ ಬಿಡುಗಡೆಗೊಳಿಸಿರುವ ಆರೋಗ್ಯ ಬುಲೆಟಿನ್ ‌ನಲ್ಲಿ ಮಂಗಳವಾರ ಸಂಜೆ 5ರಿಂದ ಇಂದು ಸಂಜೆ 5 ಗಂಟೆಯೊಳಗೆ ಹೊಸ 20 ಪ್ರಕರಣಗಳು ವರದಿಯಾಗಿರುವುದಾಗಿ ತಿಳಿಸಿದೆ.

ಈ ಪೈಕಿ ದ.ಕ. ಜಿಲ್ಲೆಯ ಬೋಳೂರು ಗ್ರಾಮದ 11 ವರ್ಷದ ಬಾಲಕಿ, 35 ವರ್ಷದ ಮಹಿಳೆ ಮತ್ತು ಬಂಟ್ವಾಳ ಪೇಟೆಯ 16 ವರ್ಷದ ಬಾಲಕಿ ಸೇರಿ 3 ಮಂದಿ, ಬಾಗಲಕೋಟೆಯಲ್ಲಿ 13, ಬೆಂಗಳೂರಿನಲ್ಲಿ ಇಬ್ಬರಿಗೆ ಮತ್ತು ಕಲಬುರಗಿ ಹಾಗೂ ವಿಜಯಪುರದಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿವೆ.

ಒಟ್ಟಾರೆ ಇದುವರೆಗೆ ರಾಜ್ಯದಲ್ಲಿ ಪಾಸಿಟಿವ್ ಬಂದ 693 ಪ್ರಕರಣಗಳಲ್ಲಿ 354 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 29 ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News