ಮದ್ಯದ ಅಮಲಿನಲ್ಲಿ ಯುವಕನ ಕೊಲೆ

Update: 2020-05-06 12:37 GMT

ಬೆಂಗಳೂರು, ಮೇ 6: ಮದ್ಯದ ಅಮಲಿನಲ್ಲಿ ಯುವಕನೋರ್ವನನ್ನು ಕೊಲೆಗೈದಿರುವ ಘಟನೆ ಇಲ್ಲಿನ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಹಂಚರಹಳ್ಳಿಯ ವಿನಯ್(32) ಕೊಲೆಯಾದ ಯುವಕ ಎಂದು ಪೊಲೀಸರು ತಿಳಿಸಿದ್ದಾರೆ.

ಮೇ.4 ರಂದು ರಾತ್ರಿ ವಿನಯ್ ಹಾಗೂ ಇತರರ ನಡುವೆ ಗಲಾಟೆ ನಡೆದಿತ್ತು. ಸ್ಥಳೀಯರು ಎಲ್ಲರಿಗೂ ಬುದ್ಧಿಮಾತು ಹೇಳಿ ಕಳುಹಿಸಿದ್ದರು. ಆದರೆ ಗಲಾಟೆಯಿಂದ ಆಕ್ರೋಶಗೊಂಡಿದ್ದ ಹಂಚರಹಳ್ಳಿಯ ಪ್ರಶಾಂತ್, ಮಧು, ಕಟ್ಟುಗೊಲ್ಲಹಳ್ಳಿಯ ರಾಜ್‍ಕುಮಾರ್ ಎಂಬವರು ಸಂಚು ರೂಪಿಸಿ ಪೂರ್ವ ತಾಲೂಕು ಹಂಚರಹಳ್ಳಿ ಚರ್ಚ್ ಬಳಿ ಮಂಗಳವಾರ ರಾತ್ರಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ವಿನಯ್ ನನ್ನು ಕೊಲೆಗೈದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿರುವ ಆವಲಹಳ್ಳಿ ಠಾಣಾ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News