ದಾಖಲೆ ಸೃಷ್ಟಿಸಿದ ಮದ್ಯ ವಹಿವಾಟು: ರಾಜ್ಯದಲ್ಲಿ ಇಂದು 231.6 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ
Update: 2020-05-06 21:49 IST
ಬೆಂಗಳೂರು, ಮೇ 6: ಮೂರನೆ ದಿನವೂ ಮದ್ಯ ಖರೀದಿಗಾಗಿ ಜನರು ಮುಗಿಬಿದ್ದಿದ್ದು, ಬುಧವಾರ ರಾಜ್ಯದಲ್ಲಿ 231.6 ಕೋಟಿಯಷ್ಟು ದಾಖಲೆಯ ವಹಿವಾಟು ನಡೆದಿದೆ.
ಲಾಕ್‍ಡೌನ್ ಬಳಿಕ ಮೊದಲ ದಿನ ಅಂದರೆ ಮೇ 4ರಂದು 45 ಕೋಟಿ ರೂ. ವಹಿವಾಟು, ಎರಡನೆ ದಿನ 197 ಕೋಟಿ, ಮೂರನೆ ದಿನ 231.6 ಕೋಟಿ ವಹಿವಾಟು ನಡೆದಿದೆ. ಸಾಮಾನ್ಯ ದಿನಗಳಲ್ಲಿ ರಾಜ್ಯದಲ್ಲಿ ಸರಾಸರಿ 75 ಕೋಟಿ ರೂ. ಮದ್ಯದ ವಹಿವಾಟು ನಡೆಯುತ್ತದೆ.
ಭಾರತೀಯ ತಯಾರಿಕಾ ಮದ್ಯ 39 ಲಕ್ಷ ಲೀಟರ್ ಹಾಗೂ ಬಿಯರ್ 7 ಲಕ್ಷ ಲೀಟರ್ ಮಾರಾಟವಾಗಿದೆ. ಕಡಿಮೆ ಬೆಲೆಯ ಮದ್ಯದ ಬ್ರ್ಯಾಂಡ್‍ಗಳು ಮಂಗಳವಾರದಿಂದ ಎಲ್ಲ ಕಡೆಯೂ ಲಭ್ಯವಾಗಿವೆ.