×
Ad

11 ಅಧಿಕಾರಿಗಳಿಗೆ ಸ್ಥಾನಾಪನ್ನ ಭಡ್ತಿ

Update: 2020-05-07 22:50 IST

ಬೆಂಗಳೂರು, ಮೇ 7: ರಾಜ್ಯ ಸರಕಾರ ಸಚಿವಾಲಯದ ಸೇವೆಗೆ ಸೇರಿದ ಸರಕಾರದ ಅಧೀನ ಕಾರ್ಯದರ್ಶಿ ವೃಂದದ 11 ಅಧಿಕಾರಿಗಳಿಗೆ ಸರಕಾರದ ಉಪ ಕಾರ್ಯದರ್ಶಿ ವೃಂದಕ್ಕೆ ಸ್ಥಾನಪನ್ನ ಭಡ್ತಿ ನೀಡಿ, ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ಸೂಚಿಸಿರುವ ಹುದ್ದೆಗಳಿಗೆ ಸ್ಥಳ ನಿಯುಕ್ತಿಗೊಳಿಸಿ ನೇಮಿಸಿ ಆದೇಶ ಹೊರಡಿಸಲಾಗಿದೆ.

ಕಾರ್ಮಿಕ ಇಲಾಖೆಯ ಸರಕಾರದ ಉಪ ಕಾರ್ಯದರ್ಶಿ-ಕೆ.ಪದ್ಮಿನಿದೇವಿ, ವಿಶೇಷ ಅಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರರವರ ಕಚೇರಿ(ಐಎಂಎ)ಯ ಉಪ ಕಾರ್ಯದರ್ಶಿ-ಸಿ.ಪುಟ್ಟನಂಜಯ್ಯ, ಒಳಾಡಳಿತ ಮತ್ತು ಸಾರಿಗೆ ಇಲಾಖೆಯ ಆಂತರಿಕ ಆರ್ಥಿಕ ಸಲಹೆಗಾರರು ಮತ್ತು ಪದನಿಮಿತ್ತ ಸರಕಾರದ ಜಂಟಿ ಕಾರ್ಯದರ್ಶಿ-ಎನ್.ವೀರಬ್ರಹ್ಮಾಚಾರಿ.

ವಸತಿ, ನಗರಾಭಿವೃದ್ಧಿ ಮತ್ತು ಕಾನೂನು ಇಲಾಖೆ ಆಂತರಿಕ ಆರ್ಥಿಕ ಸಲಹೆಗಾರರು ಮತ್ತು ಪದನಿಮಿತ್ತ ಸರಕಾರದ ಉಪ ಕಾರ್ಯದರ್ಶಿ-ಎಸ್.ಜೆ.ಭಾಗ್ಯ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ಜನಸ್ಪಂದನ ಕೋಶ)ಯ ಸರಕಾರದ ಉಪ ಕಾರ್ಯದರ್ಶಿ-ಎಸ್.ಎನ್.ರಾಮಕೃಷ್ಣ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸರಕಾರದ ಉಪ ಕಾರ್ಯದರ್ಶಿ-ಎಸ್.ಡಿ.ಸುನಂದಾ.

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರಕಾರದ ಉಪ ಕಾರ್ಯದರ್ಶಿ-ಎಸ್.ವೆಂಕಟೇಶ್, ಯೋಜನೆ, ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರಕಾರದ ಉಪ ಕಾರ್ಯದರ್ಶಿ-ಸದಾನಂದ ಎಸ್.ಪವಾಸ್ಕರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರಕಾರದ ಉಪ ಕಾರ್ಯದರ್ಶಿ(2)-ವಿ.ಸುಶೀಲಾ.

ಒಳಾಡಳಿತ ಇಲಾಖೆ(ಅಪರಾಧ ಮತ್ತು ಸೆರೆಮನೆ ಮತ್ತು ಸಿನಿಮಾ)-ಜೆ.ರಾಬಿನ್ ವನರಾಜ್, ಪ್ರವಾಸೋದ್ಯಮ ಇಲಾಖೆಯ ಸರಕಾರದ ಉಪ ಕಾರ್ಯದರ್ಶಿ-ಎಂ.ಆರ್.ಗಾಯತ್ರಿಯನ್ನು ಅವರ ಹೆಸರಿನ ಮುಂದೆ ಸೂಚಿಸಿದ ಹುದ್ದೆಗಳಿಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶ ಹೊರಡಿಸಲಾಗಿದೆ.

ವರ್ಗಾವಣೆ: ಕಂದಾಯ ಇಲಾಖೆ(ಸೇವೆಗಳು-3) ಸರಕಾರದ ಉಪ ಕಾರ್ಯದರ್ಶಿ-ಟಿ.ಸಿ.ಕಾಂತರಾಜ್, ಸಮಾಜ ಕಲ್ಯಾಣ ಇಲಾಖೆಯ ಆಂತರಿಕ ಆರ್ಥಿಕ ಸಲಹೆಗಾರರು ಮತ್ತು ಪದನಿಮಿತ್ತ ಸರಕಾರದ ಉಪ ಕಾರ್ಯದರ್ಶಿ-ಜೆ.ಎಂ.ಸಿದ್ದರಾಜು, ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಸರಕಾರದ ಉಪ ಕಾರ್ಯದರ್ಶಿ-ಎನ್.ಆರ್.ಎರೇಕುಪ್ಪಿ.

ಆರ್ಥಿಕ ಇಲಾಖೆಯ ಸರಕಾರದ ಉಪ ಕಾರ್ಯದರ್ಶಿ(ಸೇವೆಗಳು-2)_ಕೆ.ಉಮಾ, ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ(ರೇರಾ)ದ ನಿಯೋಜನೆ ಮೇರೆಗೆ ಉಪ ಕಾರ್ಯದರ್ಶಿ-ಎಲ್.ಎಸ್.ಶ್ರೀಕಂಠಬಾಬು, ಲೋಕೋಪಯೋಗಿ ಇಲಾಖೆ(ಬಿಎಂಐಸಿಪಿ)ಯ ಯೋಜನಾ ಸಮನ್ವಯಾಧಿಕಾರಿ ಮತ್ತು ಪದನಿಮಿತ್ತ ಸರಕಾರದ ಉಪ ಕಾರ್ಯದರ್ಶಿ-ರಾಮಮೂರ್ತಿ.

ಉನ್ನತ ಶಿಕ್ಷಣ ಇಲಾಖೆಯ ಆಂತರಿಕ ಆರ್ಥಿಕ ಸಲಹೆಗಾರರು ಮತ್ತು ಪದನಿಮಿತ್ತ ಸರಕಾರದ ಉಪ ಕಾರ್ಯದರ್ಶಿ-ರಫಿ ಅಹಮದ್, ಯೋಜನಾ ಇಲಾಖೆಯ ಪದನಿಮಿತ್ತ ಸರಕಾರದ ಉಪ ಕಾರ್ಯದರ್ಶಿ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ನಿಯೋಜನೆ ಮೇರೆಗೆ ಉಪ ಕಾರ್ಯದರ್ಶಿ-ಡಿ.ಎಸ್.ಜೋಗೋಜಿ, ಸಮಾಜ ಕಲ್ಯಾಣ ಇಲಾಖೆಯ ಸರಕಾರದ ಉಪ ಕಾರ್ಯದರ್ಶಿಯನ್ನಾಗಿ ಎಂ.ಗೋಪಾಲಯ್ಯರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News