ಸುಂಕ ಹೆಚ್ಚಳದ ನಡುವೆಯೂ 165 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ

Update: 2020-05-07 17:43 GMT

ಬೆಂಗಳೂರು, ಮೇ 7: ಮೇ 6ರಂದು ರಾಜ್ಯ ಸರಕಾರ ಶೇ.11ರಷ್ಟು ಮದ್ಯದ ದರವನ್ನು ಏರಿಕೆ ಮಾಡಿತ್ತು. ಈ ಮೂಲಕ ಬಜೆಟ್‍ನಲ್ಲಿ ಏರಿಕೆ ಮಾಡಿದ್ದಂತೆ ಶೇ.6ರಷ್ಟು ಸೇರಿ ಶೇ.17ರಷ್ಟು ಮದ್ಯದ ದರ ರಾಜ್ಯದಲ್ಲಿ ಏರಿಕೆಯಾಗಿತ್ತು. ಆದರೆ ಮದ್ಯದ ದರ ಏರಿಕೆಯು ನಡುವೆಯೂ ರಾಜ್ಯದಲ್ಲಿ ಮದ್ಯ ಮಾರಾಟವೇನೂ ಕಡಿಮೆ ಆಗಿಲ್ಲ. ಸತತ ನಾಲ್ಕನೆ ದಿನವಾದ ಗುರುವಾರ ಕೂಡ ಬರೋಬ್ಬರಿ 165 ಕೋಟಿ ರೂ. ಮೌಲ್ಯದ ಮದ್ಯ ರಾಜ್ಯದಲ್ಲಿ ಮಾರಾಟವಾಗಿದೆ.

ಈ ಕುರಿತಂತೆ ರಾಜ್ಯ ಅಬಕಾರಿ ಇಲಾಖೆ ಮಾಹಿತಿ ಬಿಡುಗಡೆ ಮಾಡಿದ್ದು, ಗುರುವಾರ ರಾಜ್ಯದಲ್ಲಿ ಶೇ.17ರಷ್ಟು ಏರಿಕೆಯಾದ ಮದ್ಯದ ದರದ ನಡುವೆಯೂ, ಭಾರತೀಯ ಮದ್ಯ 27.56 ಲಕ್ಷ ಲೀಟರ್ ಮಾರಾಟವಾಗುವ ಮೂಲಕ, 152 ಕೋಟಿ ಸಂಗ್ರಹವಾಗಿದೆ.

ಬಿಯರ್ 5.93 ಲಕ್ಷ ಲೀಟರ್ ಮಾರಾಟವಾಗಿ 13 ಕೋಟಿ ಸಂಗ್ರಹವಾಗಿದೆ. ಈ ಮೂಲಕ ನಾಲ್ಕನೆ ದಿನವಾದ ಇಂದು ರಾಜ್ಯದಲ್ಲಿ 33.49 ಲಕ್ಷ ಲೀಟರ್ ಮದ್ಯ ಮಾರಾಟವಾಗುವ ಮೂಲಕ ಒಟ್ಟು 165 ಕೋಟಿ ಸಂಗ್ರಹವಾಗಿದೆ ಎಂಬುದಾಗಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News