ಕೊಡಗಿನಲ್ಲಿ ಒಟ್ಟು 3,979 ಮಂದಿಗೆ ಗೃಹ ಸಂಪರ್ಕ ತಡೆ

Update: 2020-05-08 14:44 GMT
ಅನೀಸ್ ಕಣ್ಮಣಿ ಜಾಯ್

ಮಡಿಕೇರಿ, ಮೇ.8: ಕೊರೋನ ಮುಕ್ತ ಜಿಲ್ಲೆ ಕೊಡಗಿನಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮಗಳನ್ನು ಮುಂದುವರಿಸಿದ್ದು, ಒಟ್ಟು 3,979 ಮಂದಿಯನ್ನು ಗೃಹ ಸಂಪರ್ಕ ತಡೆಯಲ್ಲಿಡಲಾಗಿದೆ.

ಹೊರ ಜಿಲ್ಲೆಗಳ 2,206 ಹಾಗೂ ಇತರ ರಾಜ್ಯಗಳ 28 ಮಂದಿ ಸಂಪರ್ಕ ತಡೆಯಲಿದ್ದಾರೆ. ಇಲ್ಲಿಯವರೆಗೆ ಒಟ್ಟು 892 ಮಂದಿಯ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ. 829 ಪ್ರಕರಣಗಳಲ್ಲಿ ನೆಗೆಟಿವ್ ವರದಿ ಬಂದಿದೆ, 62 ಮಂದಿಯ ವರದಿ ನಿರೀಕ್ಷಿಸಲಾಗುತ್ತಿದೆ. ಪ್ರಸ್ತುತ ಕೋವಿಡ್ ಆಸ್ಪತ್ರೆಯಲ್ಲಿ 50 ಮಂದಿ ದಾಖಲಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News