ಮೈಸೂರು: ಮತ್ತಿಬ್ಬರು ಕೊರೋನ ಸೋಂಕಿತರು ಗುಣಮುಖ
Update: 2020-05-08 21:55 IST
ಮೈಸೂರು,ಮೇ.8: ಮೈಸೂರು ಜಿಲ್ಲೆ ರೆಡ್‍ಝೋನ್ ನಿಂದ ಆರೆಂಜ್ ಝೋನ್ ನತ್ತ ದಾಪುಗಾಲು ಹಾಕುತಿದ್ದು, ಶುಕ್ರವಾರ ಮತ್ತಿಬ್ಬರು ಕೊರೋನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.
ಈ ಸಂಬಂಧ ಮಾಧ್ಯಮ ಹೇಳಿಕೆ ಹೊರಡಿಸಿರುವ ಅವರು, ನಗರದ ಕೋವಿಡ್-19 ನೂತನ ಜಿಲ್ಲಾಸ್ಪತ್ರೆಯ ಐಸೋಲೇಷನ್‍ನಲ್ಲಿ 7 ಮಂದಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಲ್ಲಿ ಇಂದು ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 5 ಮಂದಿ ಕೊರೋನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.