ವಾಟ್ಸ್ ಆ್ಯಪ್ ಸಂದೇಶ ಪ್ರಕರಣ: ಕೇಸು ದಾಖಲಿಸುವಂತೆ ನ್ಯಾಯಾಲಯ ಆದೇಶ

Update: 2020-05-09 12:40 GMT

ಪುತ್ತೂರು: ವಾಟ್ಸ್ ಆ್ಯಪ್ ನಲ್ಲಿ ಕಳುಹಿಸಿದ ಸಂದೇಶವನ್ನು ತಿರುಚಿ ಕೋಮುಪ್ರಚೋದನೆಗೆ ಪೂರಕವಾಗುವಂತೆ ಸಾಮಾಜಿಕ ಜಾಲತಾಣದಲ್ಲಿ ರವಾನಿಸಿದ ಪರಿಣಾಮ ತನಗೆ ಬೆದರಿಕೆ ಕರೆಗಳು ಬಂದಿವೆ ಎಂದು ಪುತ್ತೂರಿನ ವೈದ್ಯರೊಬ್ಬರ ನೀಡಿರುವ ದೂರು ಸ್ವೀಕರಿಸಿದ ಪುತ್ತೂರು ನ್ಯಾಯಾಲಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಪುತ್ತೂರು ನಗರಠಾಣೆಗೆ ಆದೇಶ ನೀಡಿದೆ. 

ಮಾ.20ರಂದು ಪುತ್ತೂರಿನ ಮಹಾವೀರ ಆಸ್ಪತ್ರೆಯ ವೈದ್ಯ ಡಾ. ಸುರೇಶ್ ಪುತ್ತೂರಾಯ ಅವರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಸಂದೇಶವೊಂದನ್ನು ರವಿಪ್ರಸಾದ್ ಶೆಟ್ಟಿ ಎಂಬವರು ತಿರುಚಿ ಆ ಸಂದೇಶವನ್ನು ಕೋಮುಪ್ರಚೋದಕಗೊಳಿಸಿ ಮತ್ತೆ ಸಂದೇಶ ಹರಿಯಬಿಟ್ಟಿದ್ದಾರೆ. ಇದರಿಂದಾಗಿ ತನಗೆ ದೇಶ ವಿದೇಶಳಿಂದ ಬೆದರಿಕೆ ಕರೆಗಳು ಬಂದಿದೆ ಎಂದು ವಕೀಲ ಮಹೇಶ್ ಕಜೆ ಅವರ ಮೂಲಕ ವೈದ್ಯ ಡಾ. ಸುರೇಶ್ ಪುತ್ತೂರಾಯ ಅವರು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. 

ಇದೀಗ ಪುತ್ತೂರು ನ್ಯಾಯಾಲಯ ವೈದ್ಯರ ವಿರುದ್ಧ ಸಂದೇಶ ರವಾನೆ ಮಾಡಿದ ರವಿಪ್ರಸಾದ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಪೊಲೀಸರಿಗೆ ಆದೇಶ ನೀಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News