ರಾಜಸ್ಥಾನದಲ್ಲಿದ್ದ ಹೆತ್ತವರ ಮಡಿಲು ಸೇರಿದ ಧಾರವಾಡದಲ್ಲಿ ಬಾಕಿಯಾಗಿದ್ದ ಬಾಲಕಿಯರು

Update: 2020-05-09 18:17 GMT

ಧಾರವಾಡ, ಮೇ 9: ಲಾಕ್ ಡೌನ್ ಜಾರಿಯಿಂದಾಗಿ ದೂರದ ರಾಜಸ್ಥಾನದಲ್ಲಿದ್ದ ತಮ್ಮ ಪಾಲಕರನ್ನು ಸೇರಲಾಗದೆ ಆತಂಕಕ್ಕೀಡಾಗಿದ್ದ ಇಬ್ಬರು ಬಾಲಕಿಯರು (10 ವರ್ಷದ ರೋಮುಕುಮಾರಿ, 8 ವರ್ಷದ ಪೋಸುಕುಮಾರಿ) ಶುಕ್ರವಾರ(ಮೇ 8) ರಾತ್ರಿ, ರಾಜಸ್ಥಾನದ ಸಿರೋಹಿ ಜಿಲ್ಲೆಯ ಮೆಮಂಡ್ವಾರ ಗ್ರಾಮದಲ್ಲಿರುವ ತಮ್ಮ ತಂದೆ ತಾಯಿಗಳ ಮಡಿಲು ಸೇರಿದ್ದಾರೆ.

ಕಳೆದ ಐವತ್ತು ದಿನಗಳಿಂದ ಹೆತ್ತವರಿಂದ ದೂರವಾಗಿದ್ದ ಈ ಮಕ್ಕಳನ್ನು ಅವರ ಪಾಲಕರೊಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ದೀಪಾ ಚೋಳನ್, ಹುಬ್ಬಳ್ಳಿ ನಗರ ತಹಶೀಲ್ದಾರ್ ಶಶಿಧರ ಮಾಡ್ಯಾಳ ಸೇರಿದಂತೆ ಹಲವರು ವಿಶೇಷ ಪ್ರಯತ್ನ ಮಾಡಿದ್ದರು.

ಮೇ 7 ರಂದು ಜಿಲ್ಲಾಧಿಕಾರಿ ಶುಭ ಹಾರೈಸಿ ಮಕ್ಕಳನ್ನು ಬೀಳ್ಕೊಟ್ಟಿದ್ದರು. ರಮೇಶ್ ರಾವಲ್ ಅವರು ತಮ್ಮ ಸ್ವಂತ ಕಾರನ್ನು ಸ್ವತಃ ಚಾಲನೆ ಮಾಡಿಕೊಂಡು ದೂರದ ರಾಜಸ್ಥಾನದವರೆಗೆ ಹೋಗಿ ಮಕ್ಕಳನ್ನು ಅವರ ಪಾಲಕರಿಗೆ ತಲುಪಿಸಿದ್ದಾರೆ. ಮಕ್ಕಳು ತಲುಪಿರುವ ಕುರಿತು ರಾಜಸ್ಥಾನದ ಸಿರೋಹಿ ಜಿಲ್ಲಾಧಿಕಾರಿ ಭಗವತಿ ಪ್ರಸಾದ್, ಧಾರವಾಡ ಜಿಲ್ಲಾಧಿಕಾರಿಗೆ ಲಿಖಿತ ಪತ್ರವನ್ನೂ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News