ಹಸಿರು ವಲಯದಲ್ಲಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಒಂದೇ ದಿನ 8 ಕೊರೋನ ಪಾಸಿಟಿವ್

Update: 2020-05-10 07:29 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಮೇ.10: ಇದುವರೆಗೆ ಒಂದೇ ಒಂದು ಕೊರೋನ ಸೋಂಕು ಪ್ರಕರಣ ಪತ್ತೆಯಾಗದೇ ಹಸಿರು ವಲಯದಲ್ಲಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಒಂದೇ ದಿನ 8 ಕೊರೋನ ಪ್ರಕರಣಗಳು ಪಾಸಿಟಿವ್ ಬಂದಿದ್ದು, ಜಿಲ್ಲೆಯ ಜನತೆಯಲ್ಲಿ ಆತಂಕ ಸೃಷ್ಟಿಸಿದೆ.

ಈ ಪೈಕಿ ಶಿಕಾರಿಪುರದ 7 ಮಂದಿ ಹಾಗೂ ತೀರ್ಥಹಳ್ಳಿಯ ಒಬ್ಬರಿಗೆ ಕೊರೋನ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಬುಲೆಟಿನ್ ತಿಳಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಅಹಮದಾಬಾದ್‌ನಿಂದ ಬಂದಿದ್ದ ಒಂಭತ್ತು ಮಂದಿಯ ಪೈಕಿ ಶಿಕಾರಿಪುರದ ಏಳು ಮಂದಿ ಹಾಗೂ ತೀರ್ಥಹಳ್ಳಿಯ ಒಬ್ಬರಿಗೆ ಕೊರೋನ ಪಾಸಿಟಿವ್ ಬಂದಿದೆ ಎಂದು ತಿಳಿಸಿದರು.

ಇವರೆಲ್ಲ ಅಹಮದಾಬಾದ್‌ನಿಂದ ನೇರವಾಗಿ ಇಲ್ಲಿಗೆ ಬಂದಿದ್ದಾರೆ. ಚೆಕ್‌ಪೋಸ್ಟ್‌ನಲ್ಲಿ ಸಾಮಾನ್ಯ ತಪಾಸಣೆ ನಡೆಸಿದ್ದಾರೆ. ಆ ಬಳಿಕ ಇವರನ್ನು ನೇರವಾಗಿ ಕ್ವಾರಂಟೈನ್‌ಗೆ ಕಳುಹಿಸಿ, ಚಿಕಿತ್ಸೆ ಆರಂಭಿಸಲಾಗಿದೆ ಎಂದರು. ಅಹಮದಾಬಾದ್‌ನಿಂದ ಬಂದಿದ್ದವರಿಂದ ಸೋಂಕು ಪತ್ತೆಯಾದ ಹಿನ್ನೆಲೆ ಶಿವಮೊಗ್ಗ ಗ್ರೀನ್ ಝೋನ್‌ನಲ್ಲೇ ಉಳಿಯಲಿದೆ ಎಂದು ಈಶ್ವರಪ್ಪ ತಿಳಿಸಿದರು.

ಜಿಲ್ಲೆಯಲ್ಲಿ 8 ಜನರಿಗೆ ಕೊರೋನ ದೃಢಪಟ್ಟಿರುವುದು ಆತಂಕದ ವಿಷಯ. ಜಿಲ್ಲೆಯ ಜನರಲ್ಲಿ ನನ್ನ ಕಳಕಳಿಯ ಮನವಿ, ದಯವಿಟ್ಟು ಅವಶ್ಯಕತೆ ಇದ್ದಲ್ಲಿ ಮಾತ್ರ ಹೊರಗೆ ಬನ್ನಿ, ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ. ಸರ್ಕಾರ ಮತ್ತು ಜಿಲ್ಲಾಡಳಿತದ ನಿಯಮಗಳನ್ನು ತಪ್ಪದೆ ಪಾಲಿಸಿ.

-ಕೆ.ಎಸ್.ಈಶ್ವರಪ್ಪ( ಟ್ವೀಟ್)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News