ರೈತರಿಂದ 10 ಟನ್ ಕಲ್ಲಂಗಡಿ, 3 ಟನ್ ಟೊಮಾಟೋ ಖರೀದಿಸಿದ ವೈಎಸ್‍ವಿ ದತ್ತ

Update: 2020-05-10 12:44 GMT

ಚಿಕ್ಕಮಗಳೂರು, ಮೇ 10: ಕೋವಿಡ್-19 ಹಿನ್ನೆಲೆಯಲ್ಲಿ ರೈತರು ತಾವು ಬೆಳೆದ ಬೆಳೆ ಮಾರಾಟ ಮಾಡಲು ಸಾಧ್ಯವಾಗದೆ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು, ಕಡೂರು ಕ್ಷೇತ್ರದ ಮಾಜಿ ಶಾಸಕ ವೈಎಸ್‍ವಿ ದತ್ತ ರೈತರ ಜಮೀನಲ್ಲೇ ಕಲ್ಲಂಗಡಿ ಮತ್ತು ಟೊಮೊಟೋ ಖರೀದಿ ಮಾಡುವ ಮೂಲಕ ರೈತರ ನೆರವಿಗೆ ನಿಂತಿದ್ದಾರೆ.

ಮಾರುಕಟ್ಟೆ, ದರ ಕುಸಿತ ಸಮಸ್ಯೆಯಿಂದ ರೈತರು ತಾವು ಬೆಳೆದ ಬೆಳೆಯನ್ನು ಜಮೀನುಗಳಲ್ಲೇ ಬಿಟ್ಟಿದ್ದು, ಸುಮಾರು 1.5 ಲಕ್ಷ ರೂ., ಮೌಲ್ಯದ ಕಲ್ಲಂಗಡಿ ಮತ್ತು ಟೊಮೋಟೋವನ್ನು ವೈಎಸ್‍ವಿ ದತ್ತ ರವಿವಾರ ರೈತರ ಜಮೀನುಗಳಿಗೆ ತೆರಳಿ ಖರೀದಿ ಮಾಡಿದರು. 10 ಟನ್ ಕಲ್ಲಂಗಡಿ ಹಾಗೂ 3 ಟನ್ ಟೊಮೋಟೋ ಖರೀದಿ ಮಾಡಿದ್ದು, ಖರೀದಿಸಿದ ಕಲ್ಲಂಗಡಿ ಹಾಗೂ ಟೊಮೋಟೋವನ್ನು ಕಡೂರು, ಬೀರೂರು ಪಟ್ಟಣದ ಬಡವರಿಗೆ ಹಂಚಿಕೆ ಮಾಡುವುದಾಗಿ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News