×
Ad

ದುಬೈ ಕನ್ನಡಿಗರೊಂದಿಗೆ ಡಿಸಿಎಂ ಕಾರಜೋಳ ವಿಡಿಯೋ ಸಂವಾದ

Update: 2020-05-12 20:07 IST

ಬೆಂಗಳೂರು, ಮೇ 12: ದುಬೈ ಕನ್ನಡಿಗರೊಂದಿಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ವಿಡಿಯೋ ಸಂವಾದ ನಡೆಸಿ, ಅವರ ಅಹವಾಲುಗಳನ್ನು ಆಲಿಸಿದರು.

ಲಾಕ್‍ಡೌನ್ ಆದ ನಂತರ ಮೊದಲ ಬಾರಿಗೆ ದುಬೈಯಿಂದ ಇಂದು ಕನ್ನಡಿಗರು ನಾಡಿಗೆ ಆಗಮಿಸಲಿದ್ದು, ಅವರನ್ನು ಸ್ವಾಗತಿಸಿದ ಗೋವಿಂದ ಕಾರಜೋಳ, ಸಮಾಜ ಕಲ್ಯಾಣ ಇಲಾಖೆಯಿಂದ ವಸತಿ ಶಾಲೆ, ವಸತಿ ನಿಲಯಗಳಲ್ಲಿ ಕ್ವಾರಂಟೈನ್‍ನಲ್ಲಿರುವವರಿಗೆ ಉಚಿತ ಊಟೋಪಚಾರ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಹೊರ ರಾಜ್ಯ, ಹೊರ ದೇಶಗಳಿಂದ ಆಗಮಿಸುವವರು ಇಚ್ಛಿಸಿದರೆ ವಸತಿ ನಿಲಯಗಳಲ್ಲಿ ಕ್ವಾರಂಟೈನ್‍ನಲ್ಲಿಡಲು ವ್ಯವಸ್ಥೆ ಕಲ್ಪಿಸಲಾಗುವುದು. ಕೇಂದ್ರ ಹಾಗೂ ರಾಜ್ಯ ಸರಕಾರದ ನಿರ್ದೇಶನ ಹಾಗೂ ನಿಬಂಧನೆಗಳನ್ನು ಒಪ್ಪಿ ಬರುವವರಿಗೆ ಕ್ವಾರಂಟೈನ್‍ನಲ್ಲಿಟ್ಟು ನಿಗಾವಹಿಸಲಾಗುವುದು ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರಂಭದಲ್ಲೆ ಕೈಗೊಂಡ ದೃಢ ನಿರ್ಧಾರ, ಮುಂಜಾಗ್ರತಾ ಕ್ರಮಗಳಿಂದ ದೇಶ ಹಾಗೂ ರಾಜ್ಯದಲ್ಲಿ ಕೊರೋನ ಉಲ್ಬಣವಾಗಿಲ್ಲ. ರಾಜ್ಯ ಸರಕಾರವು ಸಾಕಷ್ಟು ಸೌಲಭ್ಯ ನೀಡುತ್ತಿದೆ. ಈ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಗೋವಿಂದ ಕಾರಜೋಳ ವಿಡಿಯೋ ಸಂವಾದದಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News