ಮೇ 17ರಿಂದ ಫಿಟ್ನೆಸ್, ಜಿಮ್ ಸೆಂಟರ್ ಆರಂಭ ಸಾಧ್ಯತೆ

Update: 2020-05-13 12:12 GMT

ಬೆಂಗಳೂರು, ಮೇ 13: ರಾಜ್ಯದಲ್ಲಿ ಕ್ರೀಡಾ ಇಲಾಖೆಯಡಿಲ್ಲಿನ ಫಿಟ್ನೆಸ್, ಜಿಮ್ ಸೆಂಟರ್‍ಗಳನ್ನು ಮೇ 17ರಿಂದ ತೆರಯುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿರುವುದಾಗಿ ಸಚಿವ ಸಿ.ಟಿ.ರವಿ ತಿಳಿಸಿದರು.

ಬುಧವಾರ ನಗರದಲ್ಲಿನ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 17ರ ನಂತರ ಫಿಟ್ನೆಸ್ ಸೆಂಟರ್‍ಗಳು, ಜಿಮ್‍ಗಳು ಮತ್ತು ಗಾಲ್ಫ್ ಕ್ಲಬ್ ತೆರೆಯಲು ಅವಕಾಶ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ ಎಂದರು.

ರಾಜ್ಯದಲ್ಲಿ ಹಂತ ಹಂತವಾಗಿ ಪ್ರವಾಸೋದ್ಯಮ ಚಟುವಟಿಕೆ ಆರಂಭಿಸಲಾಗುತ್ತದೆ. 'ಲವ್ ಯುವರ್ ನೇಟಿವ್' ಎಂಬ ಶೀರ್ಷಿಕೆನೊಂದಿಗೆ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅವಕಾಶ ನೀಡಲಿದ್ದು, ಹಂತ ಹಂತವಾಗಿ ಪ್ರವಾಸೋದ್ಯಮ ಅಭಿವೃದ್ಧಿಗೂ ಮುಂದಾಗುತ್ತಿದ್ದೇವೆ ಎಂದು ತಿಳಿಸಿದರು.

ಪ್ರವಾಸೋದ್ಯಮ ಸ್ಥಳಗಳಲ್ಲಿ ಇರುವ ಹೊಟೇಲ್‍ಗಳನ್ನು ತೆರೆಯಲು ಅವಕಾಶ ಕೇಳಿದ್ದೇವೆ. ಸಾಮಾಜಿಕ ಅಂತರ ಕಾಯ್ದುಕೊಂಡು ಈ ಹೊಟೇಲ್‍ಗಳು ಸೇವೆ ಕೊಡುವಂತೆ ಅವಕಾಶಕ್ಕೆ ಮನವಿ ಮಾಡಿದ್ದೇವೆ. ಮೇ 17ರ ನಂತರ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಸಿ.ಟಿ.ರವಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News