ರಾಜ್ಯದಲ್ಲಿ ಇಂದು 34 ಮಂದಿಗೆ ಕೊರೋನ ಪಾಸಿಟಿವ್: ಒಟ್ಟು ಸೋಂಕಿತರ ಸಂಖ್ಯೆ 959ಕ್ಕೆ ಏರಿಕೆ

Update: 2020-05-13 12:51 GMT

ಬೆಂಗಳೂರು, ಮೇ.13: ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ಹರಡುವ ಪ್ರಮಾಣ ತೀವ್ರಗೊಂಡಿದ್ದು, ಮಂಗಳವಾರ ಸಂಜೆ 5ರಿಂದ ಇಂದು ಸಂಜೆ 5 ಗಂಟೆವರೆಗಿನ ಅವಧಿಯಲ್ಲಿ ಒಟ್ಟು 34 ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿವೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆಗೊಳಿಸಿರುವ ಬುಲೆಟಿನ್ ‌ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ರಾಜ್ಯದಲ್ಲಿ ಒಟ್ಟು ಕೊರೋನ ಸೋಂಕಿತರ ಸಂಖ್ಯೆ 959ಕ್ಕೆ ಏರಿಕೆಯಾಗಿದೆ.

ಈ ಪೈಕಿ ಬೀದರ್‌ನಲ್ಲಿ 12 ಪ್ರಕರಣಗಳು ದಾಖಲಾಗಿವೆ. ಕಲಬುರಗಿಯಲ್ಲಿ 8, ಹಾಸನದಲ್ಲಿ 4, ಬೆಂಗಳೂರು ನಗರ 2, ದಕ್ಷಿಣ ಕನ್ನಡ, ಬಳ್ಳಾರಿಯಲ್ಲಿ ತಲಾ 1, ಉತ್ತರ ಕನ್ನಡ, ದಾವಣಗೆರೆ, ವಿಜಯಪುರದಲ್ಲಿ ತಲಾ 2 ಹೊಸ ಪ್ರಕರಣಗಳು ಪತ್ತೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News