ಮಲ್ನಾಡ್ ಗಲ್ಫ್ ಅಸೋಸಿಯೇಷನ್ ವತಿಯಿಂದ ರಮಝಾನ್ ಕಿಟ್ ವಿತರಣೆ

Update: 2020-05-14 04:44 GMT

ಚಿಕ್ಕಮಗಳೂರು: ಕೋವಿಡ್ -19 ಮಹಾಮಾರಿಯಿಂದ ಸಂಕಷ್ಟದಲ್ಲಿರುವ ಮಲೆನಾಡಿನ ಸುಮಾರು 1420 ಅರ್ಹ ಕುಟುಂಬಗಳನ್ನು ಗುರುತಿಸಿ ಅವರಿಗೆ ಅವಶ್ಯಕವಿರುವ, ಒಂದು ತಿಂಗಳ ಮಟ್ಟಿಗೆ ಸಾಕಾಗುವಷ್ಟು ಆಹಾರ ಸಾಮಗ್ರಿಗಳನ್ನು ಮಲ್ನಾಡ್ ಗಲ್ಫ್ ಅಸೋಸಿಯೇಷನ್ ವತಿಯಿಂದ ವಿತರಿಸಲಾಯಿತು . 

ರಮಝಾನ್ ಕಿಟ್ ವಿತರಣೆಯನ್ನು ಚಿಕ್ಕಮಗಳೂರಲ್ಲಿ ಘಟಕದ ಅಧ್ಯಕ್ಷರಾದ ಯೂಸುಫ್ ಹಾಜಿ, ಮೂಡಿಗೆರೆಯಲ್ಲಿ ಅಧ್ಯಕ್ಷರಾದ ಅಕ್ರಮ್ ಹಾಜಿ, ಬಾಳೆಹೊನ್ನೂರಿನಲ್ಲಿ ಇಬ್ರಾಹಿಂ ಶಾಫಿ, ಮಾಗುಂಡಿಯಲ್ಲಿ ಅಬ್ದುಲ್ ವಹೀದ್ ಮತ್ತು ಕೊಪ್ಪದಲ್ಲಿ ಅಬ್ದುರ್ರಹ್ಮಾನ್ ಅವರ ನೇತೃತ್ವದಲ್ಲಿ ವಿತರಿಸಲಾಯಿತು. ಕೊಡಗಿನಲ್ಲಿ ಜಿಲ್ಲಾಧ್ಯಕ್ಷರಾದ ನೌಶಾದ್ ಜನ್ನತ್ ,ಶಿವಮೊಗ್ಗದಲ್ಲಿ ಜಿಲ್ಲಾಧ್ಯಕ್ಷರಾದ ಮಯ್ಯದ್ದಿ, ಹಾಸನದಲ್ಲಿ ಅಧ್ಯಕ್ಷರಾದ ಪರ್ವೇಜ್ ಪಾಷಾರವರ ನೇತೃತ್ವದಲ್ಲಿ ಕಿಟ್ ಗಳನ್ನು ವಿತರಿಸಲಾಯಿತು.

ಜಂಟಿ ಪ್ರತಿಕಾಗೋಷ್ಠಿಯಲ್ಲಿ ಸೆಂಟ್ರಲ್ ಘಟಕದ ಗೌರವಾಧ್ಯಕ್ಷರಾದ ಬಷೀರ್ ಬಾಳ್ಳುಪೇಟ್ ,ಅಧ್ಯಕ್ಷರಾದ ಷರೀಫ್ ಕಳಸ, ಪ್ರಧಾನ ಕಾರ್ಯದರ್ಶಿಗಳಾದ ರಶೀದ್ ಅಹ್ಮದ್ ಪಾಲ್ಗೊಂಡಿದ್ದರು.

ಸೌದಿ ಅರೇಬಿಯಾದ ದಮಾಮ್ ನಲ್ಲಿ ಮಾರ್ಚ್ 28, 2014 ರಂದು ಮಲೆನಾಡು ಭಾಗದ ಅನಿವಾಸಿ ಕನ್ನಡಿಗರು ಸ್ಥಾಪಿಸಿದ ಪ್ರತಿಷ್ಠಿತ ಮಲ್ನಾಡ್ ಗಲ್ಫ್ ಅಸೋಸಿಯೇಷನ್ (ಎಂ.ಜಿ. ಎ) ಸಂಸ್ಥೆಯು ಇಂದು ದೇಶ ವಿದೇಶಗಳಲ್ಲಿ ಸುಮಾರು 10ಕ್ಕೂ ಹೆಚ್ಚು ಘಟಕಗಳನ್ನು ಹೊಂದಿದ್ದು, ಕರ್ನಾಟಕದಲ್ಲಿ ಚಿಕ್ಕಮಗಳೂರು ಸೇರಿದಂತೆ ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದು, ಈ ಸಂಸ್ಥೆಯ ವತಿಯಿಂದ ಕಳೆದ 6 ವರ್ಷಗಳಲ್ಲಿ ಹಲವಾರು ನಿರುದ್ಯೋಗಿಗಳು, ಬಡವರು, ವಿಧವೆಯರು, ಸಂಕಷ್ಟದಲ್ಲಿದ್ದವರಿಗೆ ಸಹಾಯ ಒದಗಿಸಿದೆ. ಅಲ್ಲದೆ ಮಲೆನಾಡಿನ ನಾಲ್ಕು ಜಿಲ್ಲೆಗಳಾದ್ಯಂತ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸದ ಸಹಾಯ, ತುರ್ತು ಚಿಕಿತ್ಸೆಗಳಿಗೆ ಸಹಾಯ ಮಾಡುವುದು, ರಕ್ತದಾನ ಶಿಬಿರ , ಚಿಕ್ಕಮಗಳೂರು ಜಿಲ್ಲೆಗಳಾದ್ಯಂತ 10 ಸರ್ಕಾರಿ ಆಸ್ಪತ್ರೆಗಳಿಗೆ ಪಿಪಿಇ ಕಿಟ್  ಮತ್ತು ಮಾಸ್ಕ್ ಗಳ ವಿತರಣೆ, ಸೌದಿ ಅರೇಬಿಯಾದಲ್ಲಿ ಕೋವಿಡ್ ಮಹಾಮಾರಿಯಿಂದ ಕೆಲಸ, ಸಂಬಳವಿಲ್ಲದೆ ಕಂಗಾಲಾಗಿದ್ದ ಅಸಹಾಯಕರಿಗೆ ಕೋವಿಡ್ ಫುಡ್ ಕಿಟ್ ನೀಡುವ ವ್ಯವಸ್ಥೆ, ವಂದೇ ಭಾರತ್ ಮಿಷನ್ ನಡಿ ಭಾರತಕ್ಕೆ ವಾಪಸಾಗಲು ಕೋವಿಡ್ -19 ಹೆಲ್ಪ್ ಲೈನ್, ಮೈಕ್ರೋ ಫೈನಾನ್ಸ್, ಹೀಗೆ ಹತ್ತಾರು ಸಾಮಾಜಿಕ ಸೇವೆಯನ್ನು  ಮಲ್ನಾಡ್ ಗಲ್ಫ್ ಅಸೋಸಿಯೇಷನ್ ಮಾಡುತ್ತಾ ಬಂದಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News