ಯಾದಗಿರಿ ಜಿಲ್ಲೆಯಲ್ಲಿ ಮೇ 17ರವರೆಗೆ ನಿಷೇಧಾಜ್ಞೆ

Update: 2020-05-13 18:01 GMT

ಯಾದಗಿರಿ, ಮೇ 13: ಗ್ರೀನ್ ಝೋನ್‍ನಲ್ಲಿದ್ದ ಯಾದಗಿರಿಯಲ್ಲೂ ಈಗ ಕೊರೋನ ಸೋಂಕಿತರು ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮೇ 17ರ ತನಕ ಸೆಕ್ಷನ್ 144 ಜಾರಿ ಮಾಡಲಾಗಿದೆ. 

ಈ ಬಗ್ಗೆ ಯಾದಗಿರಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ. ರಜಪೂತ್ ಆದೇಶ ಹೊರಡಿಸಿದ್ದು,  ಬೆಳಗ್ಗೆ 7ರಿಂದ ಮಧ್ಯಾಹ್ನ 1ಗಂಟೆಯವರೆಗೆ ಮಾತ್ರ ದಿನ ಬಳಕೆ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. 

ಮದ್ಯ ಮಾರಾಟವನ್ನೂ ಮಧ್ಯಾಹ್ನ 1ಗಂಟೆಗೆ ಬಂದ್ ಮಾಡಬೇಕು ಎಂದು ಸೂಚಿಸಿಲಾಗಿದೆ. ಈ ಮೊದಲು ಯಾದಗಿರಿ ಜಿಲ್ಲಾಧಿಕಾರಿಗಳು ಔಷಧಾಲಯ ಮತ್ತು ತುರ್ತು ಸೇವೆ ಹೊರತುಪಡಿಸಿ ಉಳಿದ ಎಲ್ಲ ಅಂಗಡಿಗಳನ್ನು ಲಾಕ್‍ಡೌನ್ ಮಾಡಲು ಆದೇಶಿಸಿದ್ದರು. ಅಲ್ಲದೆ, ನಗರಸಭೆ ವತಿಯಿಂದ ಧ್ವನಿವರ್ಧಕಗಳ ಮೂಲಕ ಅಂಗಡಿ ಮುಚ್ಚುವಂತೆ ತಿಳಿಸಿದ್ದರು. ಈಗ ಮತ್ತೆ ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ. ರಜಪೂತ್ ಅವರು ಸೆಕ್ಷನ್ 144 ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News