ಹನೂರು: ಪೋಲಿಸರು, ವೈದ್ಯರು, ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಕಿಟ್‍ ವಿತರಣೆ

Update: 2020-05-14 11:58 GMT

ಹನೂರು, ಮೇ.12: ಅಪಾಯವನ್ನು ಲೆಕ್ಕಿಸಿದೇ ಕೋರೊನ ಸೋಂಕಿನ ವಿರುದ್ಧ ಹೋರಾಟ ನಡೆಸುತ್ತಿರುವ ಪೋಲಿಸರು ಮತ್ತು ವೈದ್ಯರು, ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳನ್ನೊಳಗೊಂಡ ಆರೋಗ್ಯ ಕಿಟ್‍ನ್ನು ಗ್ರಾಮೀಣ ಕೂಟ ಸಂಸ್ಥೆಯ ಕ್ಷೇತ್ರ ಮ್ಯಾನೆಜೇರ್ ಪುಟ್ಟವೆಂಕೆಟೇಗೌಡ ನೇತೃತ್ವದಲ್ಲಿ ವಿತರಣೆ ಮಾಡಿದರು.

ಈ ವೇಳೆ ಮಾತನಾಡಿದ ಗ್ರಾಮೀಣ ಕೂಟ ಸಂಸ್ಥೆಯ ಮ್ಯಾನೆಜೇರ್ ಪುಟ್ಟವೆಂಕೆಟೇಗೌಡ ರವರು ಮಾರಕ ಕೋರೋನ ನಿಯಂತ್ರಿಸಲು ವೈದ್ಯರು, ಪೊಲೀಸರು, ಹೋಂಗಾರ್ಡ್ಸ್ ಹಾಗೂ ಆಶಾ ಕಾರ್ಯಕರ್ತೆಯರು ಜೀವದ ಹಂಗನ್ನು ತೊರೆದು ಹಗಲು ರಾತ್ರಿ ಎನ್ನದೇ ಕಾರ್ಯನಿರ್ವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಆರೋಗ್ಯ ಕಿಟ್‍ನ್ನು ನೀಡಲಾಗುತ್ತಿದೆ. ಅದಲ್ಲದೆ ವಿವಿಧ ಭಾಗಗಳಲ್ಲಿರುವ ಗ್ರಾಮೀಣ ಕೂಟ ಸಂಸ್ಥೆ ಸದಸ್ಯರೇ ಸರ್ಕಾರದ ನಿಯಮಗಳನ್ನು ಪಾಲಿಸುವ ಸಂಬಂಧ ನಿಮ್ಮ ನೆರೆ ಹೊರೆಯವರಿಗೆ ತಿಳಿ ಹೇಳಿ ಆರೋಗ್ಯದ ಬಗ್ಗೆ ಕಾಳಜಿ ಇಟ್ಟುಕೊಂಡು ಸಾಮಾಜಿಕ ಅಂತರವನ್ನು ಕಾಪಾಡಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಖಾ ಮ್ಯಾನೇಜರ್ ಕಾರ್ತಿಕ್, ಸಿಬ್ಬಂದಿಗಳಾದ ಆಲ್ವಿನ್, ಸಿದ್ದರಾಜು, ಶಂಕರ್ ಸೇರಿದಂತೆ ಹಲವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News