ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ಸುಗ್ರೀವಾಜ್ಞೆ ಅತ್ಯಂತ ರೈತ ವಿರೋಧಿ: ಎಚ್.ಕೆ.ಪಾಟೀಲ್

Update: 2020-05-14 12:19 GMT

ಬೆಂಗಳೂರು, ಮೇ 14: ರೈತರ ಶೋಷಣೆ, ಕಳ್ಳಸಂತೆಗೆ ಬಾಗಿಲು ತೆರೆಯಬೇಡಿ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಸುಗ್ರೀವಾಜ್ಞೆ ಬೇಡ. ಸ್ವಾತಂತ್ರ್ಯ ಪೂರ್ವದ ಹಾಗೂ ಸ್ವಾತಂತ್ರ್ಯ ನಂತರದ ಶೋಷಣೆ ಮುಕ್ತ ಕೃಷಿ ಉತ್ಪನ್ನಗಳ ಮಾರಾಟ ವ್ಯವಸ್ಥೆ ನಿರ್ಮಾಣ ಪ್ರಯತ್ನಕ್ಕೆ ತಿಲಾಂಜಲಿ ನೀಡುವುದನ್ನು ಕೈಬಿಡಿ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಆಗ್ರಹಿಸಿದ್ದಾರೆ.

ಗುರುವಾರ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಎಚ್.ಕೆ.ಪಾಟೀಲ್, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಸುಗ್ರೀವಾಜ್ಞೆ ಹೊರಡಿಸುವುದು ರೈತರ ಶೋಷಣೆಗೆ ಮಣೆ ಹಾಕಿದಂತಾಗುತ್ತದೆ. ಎಪಿಎಂಸಿ ಯಾರ್ಡ್‍ನಲ್ಲಿರುವ ವ್ಯಾಪಾರಸ್ಥರಿಗೆ ಒಂದು ಕಾನೂನು ಯಾರ್ಡ್ ಹೊರಗಿನ ವ್ಯಾಪಾರಸ್ಥರಿಗೆ ಮತ್ತೊಂದು ಕಾನೂನು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.

ಈ ಸುಗ್ರೀವಾಜ್ಞೆ ಅತ್ಯಂತ ರೈತ ವಿರೋಧಿ, ಶೋಷಣೆಗೆ ಅವಕಾಶ ನೀಡುವುದು ಸರಿಯಲ್ಲ. ಕೃಷಿ ಉತ್ಪನ್ನ ಮಾರಾಟ ಸಮಿತಿಗೆ ಇಷ್ಟೊಂದು ಕಾನೂನುಗಳಿದ್ದರೂ ಶೇ.25ರಷ್ಟು ಕಳ್ಳ ವ್ಯಾಪಾರ ನಡೆದಿದೆ. ಇದನ್ನು ಮತ್ತಷ್ಟು ಸಡಿಲಿಸಿ ಕಳ್ಳಸಂತೆಗೆ ಅವಕಾಶ ನೀಡಿದರೆ ಸರಕಾರದ ಆದಾಯಕ್ಕೆ ಹೊಡೆತ ಬೀಳಲಿದೆ. ಕಾನೂನು ಅನಿವಾರ್ಯ ಎನಿಸಿದರೆ ವಿಧಾನಸಭೆಯಲ್ಲಿ ಮಸೂದೆ ಮಂಡಿಸಿ, ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಪಾಟೀಲ್ ಸಲಹೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News