ಧಾರವಾಡ: ಜಿಲ್ಲಾಡಳಿತಕ್ಕೆ ಈಗ ಹೊಸ ಸವಾಲಾದ ಹೊರರಾಜ್ಯದ ಕಾರ್ಮಿಕರ ಆಗಮನ

Update: 2020-05-14 17:27 GMT

ಧಾರವಾಡ, ಮೇ 14: ಜಿಲ್ಲೆಗೆ ಅಹಮದಾಬಾದ್‍ನಿಂದ ಆಗಮಿಸಿರುವ 9 ಜನರಿಗೆ ಏಕಕಾಲಕ್ಕೆ ಕೊರೋನ ಪಾಸಿಟಿವ್ ವರದಿ ಬಂದ ಬೆನ್ನಲ್ಲಿಯೇ ಅನ್ಯರಾಜ್ಯದಿಂದ 1,600 ಕಾರ್ಮಿಕರು ಏಕಕಾಲಕ್ಕೆ ಧಾರವಾಡಕ್ಕೆ ಆಗಮಿಸುತ್ತಿದ್ದು, ಇದು ಜಿಲ್ಲಾಡಳಿತಕ್ಕೆ ಈಗ ಹೊಸ ಸವಾಲಾಗಿದೆ.

ಈಗಾಗಲೇ ವಿವಿಧ ಬಗೆಗಳ ಮೂಲಕ ಒಟ್ಟು 768 ಜನ ಬೇರೆ ಬೇರೆ ದಿನಗಳಲ್ಲಿ ಧಾರವಾಡಕ್ಕೆ ಆಗಮಿಸಿದ್ದಾರೆ. ಆದರೆ ಈಗ ಒಂದೇ ಸಮಯಕ್ಕೆ 1,600 ಜನ ಮುಂಬೈದಿಂದ ಆಗಮಿಸುತ್ತಿರುವ ಹಿನ್ನೆಲೆ ಇವರನ್ನೆಲ್ಲ ತಪಾಸಣೆ ಮಾಡುವುದೇ ಈಗ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

ಮುಂಬೈನಿಂದ ಬರಲಿರುವ ಶ್ರಮಿಕ ಎಕ್ಸ್ ಪ್ರೆಸ್ ರೈಲಿನಲ್ಲಿ ಇವರೆಲ್ಲ ನಾಳೆ ಸಂಜೆಗೆ ಧಾರವಾಡ ರೈಲ್ವೆ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ರೈಲಿನಲ್ಲಿ ಬರುವವರೆಲ್ಲಾ ಧಾರವಾಡ ಸೇರಿದಂತೆ ಅಕ್ಕ ಪಕ್ಕದ ಜಿಲ್ಲೆಯವರೂ ಇದ್ದಾರೆ. ಬೇರೆ ಜಿಲ್ಲೆಯವರನ್ನು ಇಲ್ಲಿಯೇ ತಪಾಸಣೆ ಮಾಡಬೇಕಾ ಅಥವಾ ನೇರವಾಗಿ ಆಯಾ ಜಿಲ್ಲೆಗೆ ಕಳುಹಿಸಿ ಕೊಡಬೇಕಾ ಎನ್ನುವ ಬಗ್ಗೆ ಗೊಂದಲಗಳಿದೆ. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಅಧಿಕಾರಿಗಳ ಸಭೆ ನಡೆಸುತ್ತಿದ್ದು, ಸಭೆಯ ಬಳಿಕ ಸ್ಪಷ್ಟತೆ ದೊರೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News