ನನ್ನ ವಿರುದ್ಧ ಪಿತೂರಿ; ಒಬಾಮ ವಿರುದ್ಧ ತನಿಖೆಗೆ ಒತ್ತಾಯಿಸಿದ ಟ್ರಂಪ್

Update: 2020-05-15 15:14 GMT

ವಾಶಿಂಗ್ಟನ್, ಮೇ 15: ಡೆಮಾಕ್ರಟಿಕ್ ಪಕ್ಷದ ಎದುರಾಳಿಗಳು ನನ್ನ ವಿರುದ್ಧ ಪಿತೂರಿ ಹೂಡಿದ್ದಾರೆ ಎಂದು ಆರೋಪಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಸಂಬಂಧ ಮಾಜಿ ಅಧ್ಯಕ್ಷ ಬರಾಕ್ ಒಬಾಮ ವಿರುದ್ಧ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಅಮೆರಿಕದ ಅಧ್ಯಕ್ಷರು ಮತ್ತು ಮಾಜಿ ಅಧ್ಯಕ್ಷರು ಸಾರ್ವಜನಿಕವಾಗಿ ಜಗಳ ಮಾಡಬಾರದು ಎಂಬ ಅಲಿಖಿತ ನಿಯಮವಿದೆ. ಈಗ ಆ ನಿಯಮವನ್ನು ಮುರಿಯಲು ಟ್ರಂಪ್ ಮುಂದಾಗಿದ್ದಾರೆ.

ಒಬಾಮ ಗೇಟ್ ಎಂಬುದಾಗಿ ಸ್ವತಃಟ್ರಂಪ್ ಹೆಸರಿಸಿರುವ ಪಿತೂರಿ ಸಿದ್ಧಾಂತದ ಬಗ್ಗೆ ಒಬಾಮ ಸೆನೆಟ್‌ನಲ್ಲಿ ಹೇಳಿಕೆ ನೀಡಬೇಕು ಎಂದು ಟ್ರಂಪ್ ಒತ್ತಾಯಿಸಿದ್ದಾರೆ.

ರಶ್ಯದ ಸರಕಾರಿ ಸಂಸ್ಥೆಗಳೊಂದಿಗೆ ಟ್ರಂಪ್ ಹೊಂದಿದ್ದಾರೆನ್ನಲಾದ ಸಂಪರ್ಕಗಳ ಬಗ್ಗೆ ನಡೆಯುತ್ತಿದ್ದ ತನಿಖೆಗಳನ್ನು ಬಳಸಿಕೊಂಡು, ಒಬಾಮ ಆಡಳಿತ ಮತ್ತು ಸೇನೆಯ ಕೆಲವು ಪ್ರಭಾವಿ ವ್ಯಕ್ತಿಗಳು ನಾನು ಅಧ್ಯಕ್ಷನಾಗದಂತೆ ತಡೆಯಲು ಯತ್ನಿಸಿದ್ದಾರೆ ಎನ್ನುವುದು ಟ್ರಂಪ್‌ರ ಆರೋಪವಾಗಿದೆ.

ನೀವು ಇಷ್ಟು ಮಾಡಿ ಎಂಬುದಾಗಿ ತನ್ನ ರಿಪಬ್ಲಿಕನ್ ಪಕ್ಷದ ಅತ್ಯಂತ ನಂಬಿಕಸ್ತ ಮಿತ್ರರ ಪೈಕಿ ಓರ್ವರಾದ ಸೆನೆಟರ್ ಲಿಂಡ್ಸೇಗ್ರಹಾಮ್‌ರನ್ನು ಉದ್ದೇಶಿಸಿ ಮಾಡಿದ ಟ್ವೀಟ್‌ನಲ್ಲಿ ಟ್ರಂಪ್ ಹೇಳಿದ್ದರೆ. ಅವರು ಪ್ರಭಾವಿ ಸೆನೆಟ್ ನ್ಯಾಯಾಂಗ ಸಮಿತಿಯ ಮುಖ್ಯಸ್ಥೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News