ಮದುವೆ ಸಮಾರಂಭಗಳಿಗೂ ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರಕಾರ
Update: 2020-05-15 23:03 IST
ಬೆಂಗಳೂರು, ಮೇ 15: ಕೊರೋನ ವೈರಸ್ ಪ್ರಭಾವ ಇದೀಗ ಮದುವೆ ಸಮಾರಂಭಗಳ ಮೇಲು ತನ್ನ ಕರಾಳ ಛಾಯೆ ಬೀರಿದೆ. ಇನ್ನು ಮುಂದೆ ಮದುವೆ ಮಾಡುವವರು ಕೆಲ ಕಟ್ಟುಪಾಡುಗಳನ್ನು ಪಾಲಿಸಲೇಬೇಕಿದೆ.
ಲಾಕ್‍ಡೌನ್ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮದುವೆ ಸಮಾರಂಭಗಳಿಗಾಗಿ ಕೆಲ ಮಾರ್ಗಸೂಚಿಗಳನ್ನು ಸಿದ್ದಪಡಿಸಿ ಪ್ರಕಟಣೆ ಹೊರಡಿಸಿದೆ. ಸಾಮೂಹಿಕವಾಗಿ ಕೊರೋನ ಹಬ್ಬಬಾರದು ಎಂದು ಸರಕಾರ ಸಿದ್ಧಪಡಿಸಿರುವ ಮಾರ್ಗಸೂಚಿಯಲ್ಲಿರುವ 17 ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು.
ಮದುವೆಗಳಿಗೆ ಸ್ಥಳೀಯ ಆಡಳಿತ ಸಂಸ್ಥೆಗಳಿಂದ ಅನುಮತಿಯನ್ನು ಪಡೆಯಬೇಕು, ಒಂದು ಮದುವೆಯಲ್ಲಿ 50 ಜನಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ, ಸೂಕ್ತ ಸಾರ್ವಜನಿಕ ಸ್ಥಳ ಮತ್ತು ನೈಸರ್ಗಿಕ ವಾತಾವರಣ ಇರುವ ಕಡೆ ಮದುವೆಗಳು ನಡೆಯಬೇಕು ಎಂದು ಹೇಳಲಾಗಿದೆ.