×
Ad

ಆನಂದ್ ತೇಲ್ತುಂಬ್ಡೆ ಬಂಧನಕ್ಕೆ ವಿರೋಧ: ಸಾಮಾಜಿಕ ಜಾಲತಾಣದಲ್ಲಿ #Justice4Teltumde ಅಭಿಯಾನ

Update: 2020-05-16 17:35 IST

ಬೆಂಗಳೂರು, ಮೇ 13: ಹಿರಿಯ ವಿಚಾರವಾದಿ ಹಾಗೂ ಮಾನವ ಹಕ್ಕು ಹೋರಾಟಗಾರ ಡಾ.ಆನಂದ್ ತೇಲ್ತುಂಬ್ಡೆ ಅವರ ಬಂಧನ ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ #Justice4Teltumde ಅಭಿಯಾನ ಪ್ರಾರಂಭವಾಗಿದೆ.

ಡಾ.ಆನಂದ್ ತೇಲ್ತುಂಬ್ಡೆ ಅವರನ್ನು ಬಂಧಿಸಿ ಒಂದು ತಿಂಗಳಾಗುತ್ತಿದೆ. ದೇಶದ ಒಬ್ಬ ಪ್ರಮುಖ ವಿದ್ವಾಂಸರೊಂದಿಗೆ ಹಾಗೂ ಭೀಮಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿರುವ ಚಿಂತಕರೊಂದಿಗೆ ನಾವಿದ್ದೇವೆಂಬ ಬೆಂಬಲಾರ್ಥವಾಗಿ ಮೇ 16ರಂದು ನ್ಯಾಯದಿನವನ್ನಾಗಿ ಆಚರಿಸುವಂತೆ ಹಿರಿಯ ನ್ಯಾಯವಾದಿಗಳು, ನ್ಯಾಯಮೂರ್ತಿಗಳು, ಮಾನವ ಹಕ್ಕು ಹೋರಾಟಗಾರರು ಜನತೆಗೆ ಕರೆ ನೀಡಿದ್ದರು.

ಇದಕ್ಕೆ ಬೆಂಬಲವಾಗಿ ಸಾಮಾಜಿಕ ಜಾಲತಾಣದಲ್ಲಿ ಆನಂದ್ ತೇಲ್ತುಂಬ್ಡೆ ಅವರ ಬಂಧನ ವಿರೋಧಿಸಿ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಸೇರಿ ಸಾವಿರಾರು ಮಂದಿ ಪೋಸ್ಟ್ ಮಾಡಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮದ ಪ್ರೊಫೈಲ್ ಗಳಿಗೆ ಡಾ.ಆನಂದ್ ತೇಲ್ತುಂಬ್ಡೆ ಅವರ ಫೋಟೋವನ್ನು ಹಾಕಿದ್ದಾರೆ. #Justice4Teltumde ಹ್ಯಾಶ್ ಟ್ಯಾಗ್ ಮೂಲಕ ಟ್ವಿಟರ್, ಫೇಸ್ ಬುಕ್ ನಲ್ಲಿ ಅಭಿಯಾನದಲ್ಲಿ ಕೈಗೊಂಡಿದ್ದಾರೆ. 

ಈ ಅಭಿಯಾನಕ್ಕೆ ಹಿರಿಯ ಪರಿಸರವಾದಿ ಯಲ್ಲಪ್ಪ ರೆಡ್ಡಿ, ನಿವೃತ್ತ ನ್ಯಾ.ಗೋಪಾಲ ಗೌಡ, ನಾಗಮೋಹನ ದಾಸ್, ಮಾಜಿ ಅಡ್ವಕೇಟ್ ಜನರಲ್ ರವಿವರ್ಮ ಕುಮಾರ್, ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು, ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಬೆಂಜವಾಡ ವಿಲ್ಸನ್, ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ, ಸ್ವರಾಜ್ ಅಧ್ಯಕ್ಷ ಯೋಗೇಂದ್ರ ಯಾದವ್, ದೇವನೂರ ಮಹಾದೇವ ಸೇರಿದಂತೆ ದೇಶದ ಪ್ರಮುಖರು ಬೆಂಬಲ ವ್ಯಕ್ತಪಡಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News