ನೀರಿನ ಘಟಕದ ಸುತ್ತ ಅಸ್ವಚ್ಛತೆ: ಅಧಿಕಾರಿಗಳನ್ನು ತರಾಟೆಗೆ ತೆಗದ ಸಚಿವ ಬಿ.ಸಿ.ಪಾಟೀಲ್
ಹಾವೇರಿ, ಮೇ 16: ಶುದ್ಧ ಕುಡಿಯುವ ನೀರಿನ ಘಟಕದ ಸುತ್ತ ಅಸ್ವಚ್ಛತೆ ಕಂಡು ಬಂದ ಹಿನ್ನೆಲೆಯಲ್ಲಿ ಬೇಸರ ವ್ಯಕ್ತಪಡಿಸಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚನ್ನಳ್ಳಿ ಗ್ರಾಮದಲ್ಲಿ ನಡೆದಿದೆ.
ಚನ್ನಳ್ಳಿ ಗ್ರಾಮಕ್ಕೆ ಭೇಟಿ ನೀಡಿದಾಗ ಶುದ್ಧ ಕುಡಿಯುವ ನೀರಿನ ಘಟಕ ವೀಕ್ಷಿಸಿದ ಸಚಿವರು, ಸ್ವಚ್ಛತೆ ಕಡೆಗೆ ನೀವು ಯಾಕೆ ಗಮನ ಕೊಟ್ಟಿಲ್ಲ, ನಿಮ್ಮಿಬ್ಬರನ್ನೂ ಸಸ್ಪೆಂಡ್ ಮಾಡಿಸೋಣವೇ ಎಂದು ತಾಲೂಕಿನ ಇಇಓ ಮತ್ತು ಪಿಡಿಓಗಳನ್ನು ತರಾಟೆಗೆ ತೆಗೆದುಕೊಂಡರು.
ಶುದ್ಧ ನೀರಿನ ಘಟಕದ ಸುತ್ತ ಕಸ ಬಿದ್ದಿದೆ. ನೋಡೋಕೆ ಆಗಲ್ವಾ? ಹೀಗೇ ಇದ್ದರೆ ಜನ ಹೇಗೆ ನೀರು ಕುಡಿಯಬೇಕು. ಪಂಚಾಯತ್ ಎನ್‍ಆರ್‍ಜಿನಲ್ಲಿ ಕೋಟಿಗಟ್ಟಲೇ ಹಣ ಖರ್ಚು ಮಾಡುತ್ತೀರಾ. ಒಂದು ಕಾಂಪೌಂಡ್ ಹಾಕೋಕೆ ಆಗಿಲ್ಲ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಜೊತೆಗೆ ಈ ಕೂಡಲೇ ಇದೆಲ್ಲ ಸರಿಯಾಗಬೇಕು. ಇಲ್ಲ ಅಂದರೆ ಸಸ್ಪೆಂಡ್ ಆಗುತ್ತೀರಾ ಎಂದು ಎಚ್ಚರಿಕೆ ನೀಡಿದ್ದಾರೆ.