ದಾವಣಗೆರೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ 89ಕ್ಕೇರಿಕೆ

Update: 2020-05-16 15:36 GMT

ದಾವಣಗೆರೆ, ಮೇ.16: ನಗರದಲ್ಲಿ  65 ವರ್ಷದ ವೃದ್ದೆಯಲ್ಲಿ ಕೊರೋನ ಪಾಸಿಟಿವ್ ಇರುವುದು ದೃಢಪಟ್ಟಿದ್ದು, ಈ ಮೂಲಕ ದಾವಣಗೆರೆ ನಗರದಲ್ಲಿ ಸೋಂಕು ಬಾಧಿತರ ಸಂಖ್ಯೆ 89ಕ್ಕೇರಿದೆ. 

ಒಟ್ಟು 89 ಕೊರೋರೊನ ಪಾಸಿಟಿವ್ ಪ್ರಕರಣಗಳಲ್ಲಿ 2 ಗುಣಮುಖ, 4 ಸಾವು ಸಂಭವಿಸಿದೆ. 83 ಸಕ್ರಿಯವಾಗಿವೆ. ಒಟ್ಟು 374 ಗಂಟಲು ಮಾದರಿ ಸಂಗ್ರಹಿಸಿದ್ದು, ಅದರಲ್ಲಿ 201 ಮಾದರಿಗಳು ನೆಗಟಿವ್ ಎಂದು ಬಂದಿದೆ. ಬಾಕಿ 374 ವರದಿ ಬರಬೇಕಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
 
ಜಾಲಿನಗರ ಕಂಟೈನ್‍ಮೆಂಟ್ ಝೋನ್‍ಗೆ ಡಿಸಿ ಭೇಟಿ-ಪರಿಶೀಲನೆ
ಜಾಲಿನಗರ ಕಂಟೈನ್‍ಮೆಂಟ್ ಝೋನ್‍ಗೆ ಇಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ವೇಳೆ ಜಾಲಿನಗರ ಇನ್ಸಿಡೆಂಟ್ ಕಮಾಂಡರ್ ಹಾಗೂ ದೂಡಾ ಆಯುಕ್ತ ಕುಮಾರಸ್ವಾಮಿ, ಡಿಹೆಚ್‍ಓ ಡಾ.ರಾಘವೇಂದ್ರ ಸ್ವಾಮಿ, ಇತರೆ ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News