ಕೆನಡ ಸಂಸತ್ತಿನಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ಅಧಿವೇಶನ

Update: 2020-05-17 16:48 GMT

ಒಟ್ಟಾವ (ಕೆನಡ), ಮೇ 17: ನೂತನ-ಕೊರೋನ ವೈರಸ್ ಸಾಂಕ್ರಾಮಿಕಪೀಡಿತ ದಿನಗಳಲ್ಲಿ ಕೆನಡದ ಸಂಸತ್ತು ವೀಡಿಯೊ ಕಾನ್ಫರೆನ್ಸ್ ಮೂಲಕ ಅಧಿವೇಶನವನ್ನು ನಡೆಸುತ್ತಿದ್ದು, ಇದೊಂದು ದಾಖಲೆಯಾಗಿದೆ.

ಒಂದು ತಿಂಗಳಿನಿಂದ ವಾರದ ಪ್ರತಿ ಮಂಗಳವಾರ ಮತ್ತು ಗುರುವಾರಗಳಂದು ಆರು ಸಮಯ ವಲಯಗಳಲ್ಲಿರುವ 338 ಸಂಸದರು ಝೂಮ್ ವೀಡಿಯೊ ಆ್ಯಪ್ ಮೂಲಕ ಮನೆಯಿಂದಲೇ ಸಭೆ ಸೇರುತ್ತಾರೆ ಹಾಗೂ ಸಚಿವರಿಗೆ ಪ್ರಶ್ನೆಗಳನ್ನು ಕೇಳುತ್ತಾರೆ.

ವೀಡಿಯೊ ಕಾನ್ಫರೆನ್ಸ್ ಅಧಿವೇಶನ ಆರಂಭವಾದಾಗ, ಇದೊಂದು ಐತಿಹಾಸಿಕ ದಿನ ಎಂಬುದಾಗಿ ಸ್ಪೀಕರ್ ಆ್ಯಂಟನಿ ರೋಟ ಬಣ್ಣಿಸಿದ್ದರು. ಅದೇ ವೇಳೆ, ಕ್ಯಾಮರ ಕ್ಲಿಕ್‌ಗಳ ಸದ್ದು ಕೇಳಿದಾಗ, ಸಂಸದೀಯ ನಿಯಮಗಳ ಅನುಸಾರ ಅಧಿವೇಶನದ ಕಂಪ್ಯೂಟರ್ ಪರದೆಯ ಚಿತ್ರವನ್ನು ಇಂಟರ್‌ನೆಟ್‌ನಲ್ಲಿ ಹಾಕಬಾರದು ಎಂಬುದಾಗಿ ಎಚ್ಚರಿಕೆ ನೀಡಿದ್ದರು.

ಬ್ರಿಟಿಶ್ ಮತ್ತು ಲಾತ್ವಿಯನ್ ಸಂಸತ್ತು ಸೇರಿದಂತೆ ಇತರ ಕೆಲವು ದೇಶಗಳೂ ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News